ಉ‌.ಕ ಸುದ್ದಿಜಾಲ ರಾಯಬಾಗ :

ಹಣದ ವಿಚಾರಕ್ಕೆ ವ್ಯಕ್ತಿಯೊಬ್ಬ 24 ವರ್ಷದ ಯುವಕನನ್ನ ಚಾಕುನಿಂದ ಇರಿದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಘಟನೆ ಕುಡಚಿ ಪಟ್ಟಣದಲ್ಲಿ ನಡೆದಿದೆ.

ಶುಕ್ರವಾರ ತಡ ರಾತ್ರಿ ಪಟ್ಟಣದ ಸಾಗರ್ ನಗರದ ಅಂಗನವಾಡಿ ಕೇಂದ್ರ ಸಂಖ್ಯೆ 9ರಲ್ಲಿ ವ್ಯಕ್ತಿಯೋರ್ವ ಬರ್ಬರಹತ್ಯೆ ಯಾಗಿದ್ದು ಪಟ್ಟಣದ ಜನ ಬೆಚ್ಚಿ ಬಿದ್ದಿದ್ದಾರೆ.ಯಾಸಿನ ಜಾತಗಾರ ( 24 )ಮೃತ ದುರ್ದೈವಿಯಾಗಿದ್ದಾನೆ.

ಕುಡಚಿ ಪಟ್ಟಣದ ರೋಹಿತ್ ಜಾದವ್ ಎಂಬಾತ ಕುಡಚಿ ಪೊಲೀಸ್ ಠಾಣೆಗೆ ಹೋಗಿ ನಾನು ಕೊಲೆ ಮಾಡಿದ್ದೇನೆ ಎಂದು ಶರಣಾಗಿದ್ದಾನೆ. ಕೊಲೆ ನಡೆದ ಸ್ಥಳಕ್ಕೆ ಕುಡಚಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನ ಮರನೊತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ರೋಹಿತ್ ಜಾದವ್ ನನ್ನ ಪೊಲೀಸ್ ರು ಬಂಧಿಸಿದ್ದು ತನಿಖೆ ನಡೆಸಿದ್ದಾರೆ.