ಉ.ಕ ಸುದ್ದಿಜಾಲ ಚಿಕ್ಕೋಡಿ :

ಕಾಲಿಡಲು ಕೂಡಾ ಜಾಗವಿಲ್ಲದಷ್ಟು ತುಂಬಿ ಹೊರಟ ಬಸ್‌ನಿಂದ ಆಯತಪ್ಪಿ ಬಿದ್ದ ವೃದ್ದೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾದ ವೃದ್ದೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಹಿನ್ನಲೆ ವಾಯವ್ಯ ವಿಭಾಗದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಡಿಪೋದಿಂದ ತುಂಬಿ ಹೊರಟ ಬಸ್‌ಗಳು,

ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ಡಿಪೋ ಬಸ್‌ಗೆ ಸೇರಿದ ಬಸ್ ಚಿಕ್ಕೋಡಿಯಿಂದ ಕೆರೂರ ಮಾರ್ಗವಾಗಿ ಕಾಡಾಪೂರ ಕಡೆಗೆ ಹೊರಟ್ಟಿದ್ದ ಬಸ್ ಅತಿಯಾದ ಪ್ರಯಾಣಿಕರಿಂದ ತುಂಬಿಕೊಂಡು ಹೋಗುತ್ತಿತ್ತು ಮಾರ್ಗ ಮಧ್ಯ ಕೇರೂರ ಗ್ರಾಮದಲ್ಲಿ ಬಸ್ ಹೋಗುವಾಗಲೇ ಬಸ್‌‌ನ ಮಟ್ಟಿಲು ಬಳಿ ನಿಂತಾಗ ಆಯತಪ್ಪಿ ಬಿದ್ದಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೃದೆ ಬಿದ್ದ ಪರಿಣಾಮ ಹಿಂದಿನ ಚಕ್ರ ಅಜ್ಜಿಯ ತೆಲೆಯ ಮೇಲೆಯ ಇತ್ತು‌. ಆದರೆ, ಸ್ವಲ್ಪದರಲ್ಲಿ ಉಳಿದ ಅಜ್ಜಿಯ ಪ್ರಾಣ.

ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎಂದು ಸ್ಥಳೀಯರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಿ ಬಸ್‌ಗಳ ಅವಶ್ಯಕತೆ ಇದೆಯೋ ಅಲ್ಲಿ ಹೆಚ್ಚಿನ ಬಸ್ ಬಿಡುವಂತೆ ಆಗ್ರಹಿಸಿದ ಸ್ಥಳೀಯರು ಎಲ್ಲ ಉಚಿತ ಭಾಗ್ಯಗಳನ್ನ ನೀಡುವ ಸರ್ಕಾರ ಎಲ್ಲಿ ಎಷ್ಟು ಅವಶ್ಯಕತೆ ಇದೆ ಎಂದು ತಿಳಿಯ ಬೇಕಿದೆ. ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರಾದ ಮಂಜುನಾಥ ಪರಗೌಂಡ

ಸ್ವಲ್ಪದರಲ್ಲಿಯೇ ಪಾರಾದ ಅಜ್ಜಿಯ ವಿಡಿಯೋ