ಉ.ಕ ಸುದ್ದಿಜಾಲ ಅಥಣಿ :

ಜಮೀನಿನ ಸಲುವಾಗಿ ದಾಯಾದಿಗಳ ಮಧ್ಯ ಹಲವಾರು ಬಾರಿ ಜಗಳ ನಡೆಯುತ್ತಲೇ ಇತ್ತು ಇಂದು ಕೊಲೆಯಲ್ಕಿ ಅಂತ್ಯವಾಗಿರುವ ಘಟನೆ  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

ಮಾಳು ಯಮಗಾರ (35) ಕೊಲೆಯಾದ ವ್ಯಕ್ತಿ ದಾಯಾದಿಗಳಾದ ಶಿವಾಜಿ ಯಮಗಾರ (50) ಹಾಗೂ ಶಿವಾಜಿ ಪುತ್ರ ಸಂಜು ಯಮಗಾರ (24) ಕೂಡಿ ಕಲ್ಲಿನಿಂದ ಜಜ್ಜಿ  ಮಾಳು ಯಮಗಾರನನ್ನ ಕಲ್ಲಿನಿಂದ ತಲೆಗೆ ಹೋಡೆದಿದ್ದು ಅತಿಯಾದ ತೆಲೆಯಿಂದ ರಕ್ತ ಸ್ರಾವ ಆದ ಪರಿಣಾಮ ಮಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.

ಅಡಹಳ್ಳಿ ಗ್ರಾಮದ ಮಾಳು ಯಮಗಾರ (35) ಎಂಬ ವ್ಯಕ್ತಿ ಭೀಕರ ಕೊಲೆಯಾಗಿದ್ದಾನೆ. ತಲೆಗೆ ಜೋರಾಗಿ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ್ದಾರೆ. ತೆಲೆಗೆ ಗಾಯವಾಗಿದ್ದಿ ಮಾಳುನನ್ನ ಅಥಣಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ ತಲೆಗೆ ಜೋರಾಗಿ ಪೆಟ್ಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ.

ಜಮೀನಿನ ವಿಚಾರವಾಗಿ ದಾಯಾದಿಗಳ ನಡುವೆ ಆಗಾಗ ಜಗಳ ನಡೆಯುತ್ತಲೆ ಇತ್ತು ಕೊಲೆಯಾದ ವ್ಯಕ್ತಿ ಮಾಳು ಯಮಗಾರ ತನ್ನ ಜಮೀನಿನಲ್ಲಿ ಆಕಳು ಮೇಯಿಸುವಾಗ ಆಕಳು ತಮ್ಮ ದಾಯಾದಿಗಳಾದ ಶಿವಾಜಿ ಯಮಗಾರ ಅವರ ಜಮೀನಿನಲ್ಲಿ ಹೋಗಿದ್ದು ಇಬ್ಬರ ನಡುವೆ ಮಾತುಗಳು ವಿಕೋಪಕ್ಕೆ ತಿರುಗಿ ಜಗಳ ನಡೆದಿದೆ.

ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.