ಉ.ಕ ಸುದ್ದಿಜಾಲ ಚಿಕ್ಕೋಡಿ :
ಗಣೇಶ ಚತುರ್ಥಿ ವಿಸರ್ಜನೆ ವೇಳೆ ಯುವಕರು ಹುಚ್ವಾಟ ಮಾಡುವುದು ಅಷ್ಟಿಷ್ಟಲ್ಲ ಕೈಯಲ್ಲಿ ಹಿಡಿದು ಪಟಾಕಿ ಸಿಡಿಸುವ ವೇಳೆ ಪಟಾಕಿ ಸಿಡಿದು ಯುವಕನ ಹಸ್ತ ನುಜ್ಜು ಗುಜ್ಜಾಗಿರುವ ಘಟನೆ ಚಿಕ್ಕೋಡಿ ನಗರದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೊಸಪೇಠಗಲ್ಲಿಯಲ್ಲಿ ಈ ಘಟನೆ ನಡೆದಿದ್ದು. ಗಣೇಶೋತ್ಸವ ವೇಳೆಯಲ್ಲಿ ಸುತ್ತಳೆ ಬಾಂಬ್ ಪಟಾಕಿ ಸಿಡಿಸುವ ವೇಳೆಯಲ್ಲಿ ಪಟಾಕಿ ಒಮ್ಮಿಂದೊಮ್ಮೇಲೆ ಕೈಯಲ್ಲಿಯೇ ಸ್ಪೋಟಗೊಂಡಿದೆ.
ಇದರಿಂದ 19 ವರ್ಷದ ಓಂಕಾರ ಎಂಬ ಯುವಕನ ಕೈ ಬೆರಳುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.