ಉ.ಕ ಸುದ್ದಿಜಾಲ ಅಥಣಿ :

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊರ್ವನ ಶವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹಿರೇಹಳ್ಳದಲ್ಲಿ ಪತ್ತೆಯಾಗಿದೆ.

ಕೊಕಟನೂರ ಗ್ರಾಮದ ಪರುಶುರಾಮ ಜಟ್ಟೆಪ್ಪ ಭಜಂತ್ರಿ (45) ಶವ ಪತ್ತೆಯಾಗಿವೆ. ಈತ ಟೇಲರಿಂಗ್ ಕೆಲಸದ ನಿಮಿತ್ತ ಕಳೆದ ಒಂದು ವಾರದ ಹಿಂದೆ ಜಮಖಂಡಿ ತಾಲೂಕಿನ ಕನ್ನೋಳ್ಳಿ ಗ್ರಾಮಕ್ಕೆ ಹೋಗಿದ್ದ ಇವರು ಬುಧವಾರ ಗ್ರಾಮದ ಹಿರೇಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಕುರಿತು ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.