ಉ.ಕ ಸುದ್ದಿಜಾಲ ಚಿಕ್ಕೋಡಿ :

ವಿಜಯಪೂರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸಾಯಂಕಾಲ ಶೌಚಕ್ಕೆ ಹೋದಾಗ ಕಾಲು ಜಾರಿಬಿದ್ದ ಗಾಯಗೊಂಡದ್ದು ಶ್ರೀಗಳನ್ನಯ ಹೆಚ್ಚಿನ ಚಿಕಿತ್ಸೆಗೆ ಕಣ್ಣೇರಿಮಠಕ್ಕೆ ರವಾನೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳು ಪ್ರವಚನ ಇಂದೇ ಪ್ರಾರಂಭವಾಗಿದ್ದು, ಇಂದೆ ಈ ಘಟನೆ ನಡೆದಿದ್ದು ಸ್ಥಳೀಯರಲ್ಲಿ ಪ್ರವಚನ ಕೇಳಲು ನೀರಾಕರಣೆಯಾದಂತಾಗಿದೆ. ಸದ್ಯ ಸಿದ್ದೇಶ್ವರ ಸ್ವಾಮೀಜಿ ಅವರನ್ನ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕನ್ನೇರಿಮಠದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಗಂಭೀರ ಪ್ರಮಾಣದ ಗಾಯ ಹಿನ್ನೆಲೆ ಪ್ರವಚನ ಕಾರ್ಯ ರದ್ದಾಗಿದೆ.