ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಗೆ ಕಂಟಕವಾಗುತ್ತಿದೆ ನೆರೆಯ ಮಹಾರಾಷ್ಟ್ರ, ಇಂದು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ 129 ಕರೋನ ಕೇಸ್ ದೃಢ, ಗಡಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಇದ್ದರೂ ಸಹ ಪ್ರಕರಣಗಳ ಸಂಖ್ಯೆ ಹೆಚ್ಚಳ,

ಮಹಾರಾಷ್ಟ್ರದಲ್ಲಿ ದಿಮದಿಂದ ದಿನಕ್ಕೆ ಕೊರೊನಾ ಸಂಕ್ಯೆ ಹೆಚ್ಚಾಗುತ್ತಿದ್ದು ದಿನಂಪ್ರತಿ‌ 30 ಸಾವಿರಕ್ಕೂ ಅಧಿಕ ಕೊರೊನಾ ಕೇಸ್‌ಗಳು ಪತ್ತೆಯಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಬಂದ್ ಮಾಡಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬ ವ್ಯಕ್ತಿಗೂ  Rtpcr ವರದಿ ಇಲ್ಲದೆ ಯಾವುದೇ ವಾಹನ ಒಳಗೆ ಬಿಟ್ಟುಕೊಳ್ಳದ ಕರ್ನಾಟಕ ಪೊಲೀಸರು, ನಿಪ್ಪಾಣಿಯ ಕುಗನೊಳ್ಳಿ ಚಕ್‌ ಪೋಸ್ಟ್ ಬಳಿ 50 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.