ಉ.ಕ ಸುದ್ದಿಜಾಲ ಹುಕ್ಕೇರಿ :

ಒಂದೇ ದಿನ ಎರಡು ಪ್ರತ್ಯೇಕ ದಾಳಿ ನಡೆಸಿ ಕಂಟ್ರಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ದಾಳಿ ನಡೆಸಿ ಮಾರಾಟ ಮಾಡಲು ತರುತ್ತಿದ್ದ ಕಂಟ್ರಿ ಸಾರಾಯಿ ವಶಕ್ಕೆ ಪಡೆದ ಪೊಲೀಸರು.

ಸದಾನಂದ ಲಕ್ಷ್ಮಣ ನಾಯಿಕ್, (33) ಹಾಗೂ ರಾಮಪ್ಪ ನಿಂಗರಾಯ್ ಬಂಧಿತರು. ಸದಾನಂದ ಎಂಬ ಆರೋಪಿಯಿಂದ 90 ಲೀಟರ್ ಹಾಗೂ ರಾಮಪ್ಪ ಎಂಬ ಆರೋಪಿಯಿಂದ 20 ಲೀಟರ್ ಕಂಟ್ರಿ ಸಾರಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರತ್ಯೇಕವಾಗಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮನಮರಡಿ ಬಳಿ ಪೊಲೀಸರ ದಾಳಿ, ಅಲದಾಳ ಕ್ರಾಸ್ ಹಾಗೂ ಗುಟಗುದ್ದಿ ಬಳಿ ತಲಾ ಒಬ್ಬೊಬ್ಬ ಆರೋಪಿ ಬಂಧನ.

ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ‌.