ಉ.ಕ ಸುದ್ದಿಜಾಲ ಕಾಗವಾಡ :

ಸಾಲಭಾದೆ ತಾಳಲಾರದೆ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಟವರ್ ಏರುವಾಗಲೇ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ವ್ಯಕ್ತಿ ಸಂಜಯ್ ಕಲಗೌಡ ಪಾಟೀಲ್ (35) ಟವರ್ ಏರಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಂಜಯ್ ಸಾವನ್ನಪ್ಪಿದ್ದಾನೆ.

ಖಾಸಗಿ ಹಾಗೂ ಸರಕಾರಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿಕೊಂಡಿದ್ದ ಸಂಜಯ್ ಟವರ್ ಏರಿ ಸಾಲದ ಪರಿಹಾರ ಕುರಿತು ಆತ್ಮಹತ್ಯೆ ಯತ್ನ ನಡೆಸಿ ಗಮನ ಸೆಳೆಯಲು ಮುಂದಾಗಿದ್ದ ಸಂಜಯ ಪಾಟೀಲ.

ಆತ್ಮಹತ್ಯೆಗೆ ಯತ್ನಿಸಿದ ಸಂಜಯ ಪಾಟೀಲ ಟವರ ಮೇಲಿಂದ ಬಿದ್ದಿರುವ ವಿಡಿಯೋ

ಆದರೆ, ಆಯೆ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.