ಉ.ಕ ಸುದ್ದಿಜಾಲ ಮೋಳೆ :

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಳುವರಿ ಪಡೆಯಬೇಕಾದರೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ ಜೊತೆ ಪಶು ಸಂಗೋಪನೆ ಕೂಡಾ ಅಳವಡಿಕೆ ಮಾಡ ಬೇಕು ಎಂದು ರೈತರನ್ನ ಉದ್ದೇಶಿಸಿ ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಲ್ ಐ ರೋಡಗಿ ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಸಿದ್ದೇಶ್ವರ ಕೃಷಿ ವಿಕಾಸ ರೈತ ಉತ್ಪಾದಕ ಕಂಪನಿ ಉದ್ಘಾಟನೆ ಹಾಗೂ ತರಬೇತಿ ಶಿಬಿರದಲ್ಲಿ ರೈತರನ್ನ ಉದ್ದೇಶಿಸಿ ಮಾತನಾಡಿದ ಅವರು, ತಾವೂ ಬೆಳೆದ ಬೆಳೆಗಳನ್ನ ಮಾರಾಟ ಮಾಡಲು ದಲ್ಲಾಳಿ ಗಳಿಂದ ತೊದರೆಯಾಗುತ್ತಿದೆ ಹೀಗಾಗಿ ಚಿಕ್ಕ ರೈತರ ಅನಕೂಲಕ್ಕಾಗಿ ಕೃಷಿ ವಿಕಾಸ ರೈತ ಉತ್ಪಾದಕ ಕಂಪನಿ ಪ್ರಾರಂಭ ಮಾಡಲಾಗಿದೆ. ಸರ್ಕಾರದ ವತಿಯಿಂದ ಮೂರು ವರ್ಷದ ವರೆಗೆ 30 ರಿಂದ 32 ಲಕ್ಷದ ವರೆಗೆ ಹಣ ನೀಡಲಾಗುತ್ತಿದೆ. ಇದರಲ್ಲಿ 15 ಲಕ್ಷ ಮೌಲ್ಯ ವರ್ಧನೆ ಹಾಗೂ ಸಂಘ ನಡೆಸಲಿಕ್ಕೆ ಸಹಾಯ ಧನ ಕೊಡುತ್ತದೆ.

ಮೂರು ವರ್ಷ ನಡೆಸಿಕೊಂಡು ಹೋಗಬೇಕು ಈ ಸಂಘಕ್ಕೆ ಸರ್ಕಾರ ಅನುದಾನ ನೀಡುತ್ತೆ ಅದನ್ನ ನಡೆಸಕೊಂಡು ಹೋಗಬೇಕು. ರೈತ ಹೇಗೆಲ್ಲ ಬೆಳೆ ಬೆಳೆಯ ಬೇಕು ಹೇಗೆ ಇಳುವರಿ ಪಡೆದುಕೊಳ್ಳ ಬೇಕೆಂದು ಸವಿಸ್ತಾರವಾಗಿ ವಿಸ್ತರಿಸಿ ರೈತರನ್ನ ಉದ್ದೇಶಿಸಿ ಮಾತನಾಡಿದರು.

ಅಥಣಿ ವೈಧ್ಯಾಧಿಕಾರಿ ಮಲ್ಲಿಕಾರ್ಜುನ ಹುಂಡೆಕರ ಮಾತನಾಡಿ ಮೋಳೆ ಗ್ರಾಮದಲ್ಲಿ 1980 ಆಸಪಾಸಿನಲ್ಲಿ 40 ನೀರಾವರಿ ಸ್ಕಿಮ ಮಾಡಿದ್ದೀರಿ ಈ ಬರಡು ಭೂಮಿಗೆ ನೀರಾವರಿ ತಂದಿದ್ದೀರಿ ಆದರೆ, ಈಗ ಸಿದ್ದೇಶ್ವರ ಹೆಸರಿನಲ್ಲಿ ಕೃಷಿ ವಿಕಾಸ ರೈತ ಉತ್ಪಾದಕ ಕಂಪನಿ ಪ್ರಾರಂಭಿಸಿದ್ದು ಸಂತೋಷದ ವಿಷಯ ಎನ್ ಎಲ್ ಎಂ ರಾಷ್ಟ್ರೀಯ ವಿಕಾಸ ಯೋಜನೆ, ಆತ್ಮ ನಿರ್ಭರ ಭಾರತ ಒಳಗೆ ಕಾರ್ಯಕ್ರಮ ಬರುತ್ತವೆ. ಬೆಳೆ ಇಳುವರಿ ಕಡಿಮೆಯಾಗಿದೆ ಅದಕ್ಕಾಗಿ ಪಶು ಸಂಗೋಪನೆ ಬೇಕು ಜಾನುವಾರಗಳ ಸಂಖ್ಯೆ ಕಡಿಮೆ ಯಾಗಿತ್ತಿವೆ.

ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಫಲವತತ್ತೆ ಆಗಬೇಕಾದರೆ ಪಶು ಸಾಕಾಣಿಕೆ ಅವಶ್ಯಕವಾಗಿದೆ. ಪಶುಸಂಗೋಪನೆ ಮರತ್ತದ್ದೆ ಆದರೆ ಭೂಮಿ ಬರಡಾಗುತ್ತದೆ. ಅದಕ್ಕಾಗಿ ಮನುಷ್ಯನಿಗೆ ಹಾಲು ಅತ್ಯವಶ್ಯ ದಿನಂಪ್ರತಿ 250 ರಿಂದ 500 ಎಂ ಎಲ್ ವರೆಗೆ ಹಾಲು ಸೇವನೆ ಮಾಡ ಬೇಕು ಅದರ ಜೊತೆಗೆ ಜಮೀನಿಗೆ ಶಗಣಿ ಅತ್ಯವಶ್ಯಕ ಹೀಗಾಗಿ ಪಶು ಸಂಗೋಪನೆ ಅತ್ಯವಶ್ಯಕವಾಗಿದೆ. ಒಬ್ಬ ಮನಿಷ್ಯ ಪ್ರತಿ ದಿನ ಎರಡು ತತ್ತಿ ತಿನ್ನಬೇಕೆಂದು ನಾನ ಹೇಳುತಿಲ್ಲ WHO ಹೇಳುತ್ತಿದೆ ಹೀಗಾಗಿ ಅದಕ್ಕಾಗಿ ಎಲ್ಲರೂ ಸೇವನೆ ಮಾಡುವುದು ಅವಶ್ಯಕ ಎಂದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಲ್ ಐ ರೊಡಗಿ, ಅಥಣಿ ಪಶು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಹುಂಡೆಕರ, ಅಥಣಿ ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣ ಬಿರಾದರ, ಆರ್ ಡಿ ಎಸ್ ಮುಖ್ಯ ನಿರ್ವಾಹಕ ಅಧಿಕಾರಿ ಶಿವನಗೌಡ ಗೌಡತಿ, ಮೋಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಬೂತಾಳಿ ಥರಥರೆ, ಶೇಗುಣಸಿ ಪ್ರಗತಿಪರ ರೈತ ಕಲ್ಲಪ್ಪಾ ಯಲ್ಲಡಗಿ, ತರಬೇತುದಾರ ಶ್ರೀಕಾಂತ ರಾವಳೋಜಿ, ಅಧ್ಯಕ್ಷ ವಿಠ್ಠಲ ಹಳೊಳ್ಳಿ, ಉಪಾಧ್ಯಕ್ಷ ಶಿವಾನಂದ ಹೊಸಮನಿ ಹಾಗೂ ಮೋಳೆ ಗ್ರಾಮದ ರೈತರು ಉಪಸ್ಥಿತರಿದ್ದರು.