ಉ.ಕ ಸುದ್ದಿಜಾಲ ಅಥಣಿ :

ಕುಟುಂಬ ಕಲಹ ಕೊಲೆಯಲ್ಲಿ ಅಂತ್ಯ ಪತ್ನಿಯನ್ನ ಕೊಂದ ಪಾಪಿ ಪತಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯ ಮುಗಿಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ ಅರಟಾಳ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ನಿವಾಸಿ ಸುನಂದಾ ಗೋಪಾಲ ನಾಯಕ (38) ಮೃತ ದುರ್ದೈವಿ, ಗೋಪಾಲ ನಾಯಿಕ (50) ಕೊಲೆ ಮಾಡಿದ ವ್ಯಕ್ತಿ, ಕುಟುಂಬ ಕಲಹ ಹಿನ್ನಲೆಯಲ್ಲಿ ಪತಿ ಪತ್ನಿ ಜಗಳ ಪ್ರಾರಂಭವಾಗಿದ್ದು ಕೊಲೆಯಲ್ಲಿ ಅಂತ್ಯಗೊಂಡಿದೆ.

ಆರೋಪಿ ಗೋಪಾಲ ಕೂಡಗೊಲಿನಿಂದ ಹೊಡೆದು ಪತ್ನಿಯನ್ನ ಕೊಲೆ ಮಾಡಿದ್ದು ಈಗಾಗಲೇ ಐಗಳಿ ಪೋಲಿಸರು ಆರೋಪಿಯನ್ನ ಹುಡಕುತ್ತಿದ್ದಾರೆ. ಸ್ಥಳಕ್ಕೆ ಐಗಳಿ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.