ಉ.ಕ‌ ಸುದ್ದಿಜಾಲ ಧಾರವಾಡ :

ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ. ಕಾರಿನಲ್ಲಿದ್ದ ಮದನ್, ಸುರೇಶ್ ಮತ್ತು ಎಲ್.ಎನ್.ವೇಣುಗೋಪಾಲ್ ಎಂಬವರು ಮೃತಪಟ್ಟಿದ್ದಾರೆ.

ತೋಟ ನೋಡಿಕೊಂಡು ಮುಂಡರಗಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮೃತರು ಮೈಸೂರು ಹಾಗೂ ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಅಣ್ಣಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟ್ರ್ಯಾಕ್ಟರ್ಗೆ ಡಿಕ್ಕಿ, ಬೈಕ್ನಲ್ಲಿದ್ದ ಇಬ್ಬರು ಸಾವು : ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕಳೆದ ಸೋಮವಾರ ನಡೆದಿತ್ತು. ಬೈಕ್ನಲ್ಲಿದ್ದ ಗುಗ್ಗರಹಟ್ಟಿಯ ಅಬ್ದುಲ್‌ ಅರ್ಮಾನ್‌ (21) ಮತ್ತು ಸೋದರನ ಪುತ್ರಿ ಹಸೀನಾ ನಯಾಜ್‌ (5) ಮೃತಪಟ್ಟಿದ್ದಾರೆಎಂದು ಪೊಲೀಸರು ತಿಳಿಸಿದ್ದರು.

ಕಾರು-ಲಾರಿ ನಡುವೆ ಭೀಕರ ಅಪಘಾತ, ನಾಲ್ವರು ಸಾವು : ಕಾರು ಮತ್ತು ಕಬ್ಬಿಣದ ಅದಿರು ಸಾಗಿಸುತ್ತಿದ್ದ ಟಿಪ್ಪರ್‌ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಡೂರು ತಾಲೂಕಿನ ಜೈಸಿಂಗಪೂರ ಗ್ರಾಮದ ಬಳಿ ಇತ್ತೀಚಿಗೆ ನಡೆದಿತ್ತು. ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು.