ಉ.ಕ ಸುದ್ದಿಜಾಲ ರಾಯಬಾಗ :

ಕೈಯಲ್ಲಿ ಲಾಂಗ್ ಹಿಡಿದು ರಿಲ್ಸ್ ಹುಚ್ಚಾಟ ಮೇರೆದ ಯುವಕರು ಅಂದರ್ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ಯುವಕರು. ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟ ಯುವಕರ ಗ್ಯಾಂಗ್.

ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡುವ ಹುಚ್ಚಾಟ ಮುಗಳಖೋಡ ಗ್ರಾಮದ ನಾಲ್ವರು, ಸಸಾಲಟ್ಟಿ ಗ್ರಾಮದ ಓರ್ವ ಯುವಕ. ಮುಗಳಖೋಡ ಗ್ರಾಮದ ಬಸವರಾಜ ಯಡವನ್ನವರ, ಲೋಹಿತ್ ಚೌಡಕ್ಕಿ, ಚೇತನ್ ಕರಿಭೀಮಗೋಳ, ಪರಶುರಾಮ್ ಕಾಕೊಂಡಗೋಳ. ಸಸಾಲಟ್ಟಿ ಗ್ರಾಮದ ಸಿದ್ರಾಮ ಹುಕ್ಕೇರಿ ಸೇರಿ ಐವರನ್ನು ವಶಕ್ಕೆ ಪಡೆದ ಪೊಲೀಸರು.

ಕೆಲವು ತಿಂಗಳ ಹಿಂದೆ ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಿದ್ದ ಯುವಕರ ಗ್ಯಾಂಗ್. ಕುಂಭಮೇಳದಿಂದ ಮರಳಿ ಬರುವಾಗ ಮಾರಕಾಸ್ತ್ರಗಳ ಖರೀದಿ. ಲಾಂಗ್ ಹಿಡಿದು ಪೋಸ್ ಕೊಟ್ಟ ಪೋಟೋಸ್ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ್ದ ಯುವಕರು.

ರೀಲ್ಸ್ ಹುಚ್ಚಾಟದಿಂದ ಕಂಬಿ ಎಣಿಸಲು ಮುಂದಾದ ಯುವಕರು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು