ಉ.ಕ ಸುದ್ದಿಜಾಲ ಅಥಣಿ :
ರೈತರ ಜಮೀನಿನ ಪಹಣಿಯಲ್ಲಿ ವಕ್ಫ ಆಸ್ತಿ ಹೆಸರು ನಮೂದು ವಿಚಾರ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ.ಯಾವುದೇ ಕಾರಣಕ್ಕೂ ವಕ್ಫ್ ಸಮಿತಿಗೆ ಜಮೀನಿನು ಹೋಗಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಅನೇಕ ವರ್ಷಗಳಿಂದ ಇರುವ ಖಿಲಾಫ. ಉಪಚುನಾವಣೆ ಇರುವ ಹಿನ್ನೆಲೆ ಬಿಜೆಪಿಯವರು ಉಪಯೋಗ ತೆಗೆದುಕೊಳ್ಳಲು ನಡೆಸಿರುವ ಹುನ್ನಾರ. ಯಾವುದೇ ಕಾರಣಕ್ಕೂ ರೈತರ ಜಮೀನುಗಳಿಗೆ ಕೈ ಹಾಕೋದಕ್ಕೆ ನಾವು ಬಿಡಲ್ಲ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಸಿಎಂ ಹೇಳಿಕೆ ವಿಚಾರಕ್ಕೆ ಸವದಿ ಪ್ರತಿಕ್ರಿಯೆ ಬಹಳ ದಿನದಿಂದ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ನಾವು ಕೊಟ್ಟ 1 ರೂಪಾಯಿದಲ್ಲಿ 7 ಪೈಸೆ ಮಾತ್ರ ಬರುತ್ತಿದೆ.
ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಅಂತ ನಿಮಗೆ ಅನಿಸಲ್ವಾ ಅಂತ ಮರು ಪ್ರಶ್ನಿಸಿದ ಸವದಿ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ