ಉ.ಕ ಸುದ್ದಿಜಾಲ ರಾಯಬಾಗ :

ರಾಜಕೀಯ ವ್ಯವಸ್ಥೆಗಳು ತುಂಬಾ ಕೆಟ್ಟೋಗಿದೆ.
ರಾಜಕಾರಣಿಗಳು ಇಲ್ಲಿ ಪವಿತ್ರವಿಲ್ಲ. ಜಗತ್ತಿನಲ್ಲಿ ಲೂಟಿ ಮಾಡೋರು ದರೋಡೆ ಮಾಡೋರು ಇದ್ದರೆ ಅದು ರಾಜಕಾರಣಿಗಳು. ಕಾಗವಾಡ ಶಾಸಕ ರಾಜು ಕಾಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಖಾಸಗಿ ಶಾಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ಶಾಸಕ ಬಹಿರಂಗವಾಗಿ ಅಸಮಾಧಾನ. ಶಾಲೆ ಮಕ್ಕಳಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳ ನಮ್ಮಂತ ರಾಜಕಾರಣಿಗಳಿಗೆ ಕಮಿಷನ್ ಹೊಡೆಯೋಕೆ ಯೋಜನೆಯ ರೂಪಿಸಲಾಗಿದೆ.

ಇಂಥ ವೇದಿಕೆಯಲ್ಲಿ ನಾವು ಮಾತನಾಡಬಾರದು. ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತಾಗುತ್ತದೆ. ಶ್ರೀಗಳ ಜೊತೆ ಗೌರವ ಕೊಟ್ಟು ನಮ್ಮನ್ನು ಕರೆದುಕೊಂಡು ಬರಬೇಡಿ. ನಮ್ಮನ್ನು ಹಿತ್ತಿಲ್ಲ ಬಾಗಿಲಿನಿಂದ ಕರೆದುಕೊಂಡು ಬನ್ನಿ. ಆ ಮಟ್ಟಿಗೆ ಸದ್ಯ ಈಗ ವ್ಯವಸ್ಥೆ ಹದಗೆಟ್ಟು ಹೋಗಿದೆ. ನಾವೆಲ್ಲರೂ ಸುದ್ದರಿಲ್ಲ, ಪವಿತ್ರ ವಿಲ್ಲ.

ಜಗತ್ತಿನಲ್ಲಿ ಲೂಟಿಕೋರರು ದರೋಡೆಕೋರರು ತುಡುಗು ಮಾಡುವರು ಇದ್ದರೆ ರಾಜಕಾರಣಿಗಳು. ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸಾರ್ವಜನಿಕರನ್ಮ ಉದ್ದೇಶಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ.