ಉ.ಕ ಸುದ್ದಿಜಾಲ ತುಮಕೂರು : 

ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಇದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಅದೃಷ್ಟವಶಾತ್​ ಸ್ವಲ್ಪದರಲ್ಲಿ ಭಾರೀ ದುರಂತ ತಪ್ಪಿಹೋಗಿದೆ. ನಿನ್ನೆ ತಡರಾತ್ರಿ ಈ ಅಪಘಾತ ನಡೆದಿದ್ದು, ಸಚಿವ ಮಧು ಬಂಗಾರಪ್ಪನವರು ಇದ್ದ ಕಾರು ಬೆಂಗಳೂರು ಕಡೆಗೆ ಹೋಗುತ್ತಿತ್ತು.

ಈ ವೇಳೆ ಲಾರಿ ಚಾಲಕ ಕಾರನ್ನು ಉಜ್ಜಿಕೊಂಡು ಹೋಗಿದ್ದಾನೆ. ಇನ್ನೂ ಅಪಘಾತದಲ್ಲಿ ಕಾರಿನ ಮುಂದಿನ ಭಾಗ ಜಖಂ ಗೊಂಡಿದ್ದು ಕಾರಿನಲಿದ್ದವರಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

ತುಮಕೂರಿನ ಕ್ಯಾತ್ಸಂದ್ರ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಧು ಬಂಗಾರಪ್ಪ ಕಾರು ತಡರಾತ್ರಿ ನಡೆದ ಘಟನೆ, ಸ್ವಲ್ಪದರಲ್ಲಿ ತಪ್ಪಿದ ಭಾರೀ ದುರಂತ