ಉ.ಕ ಸುದ್ದಿಜಾಲ ರಾಮದುರ್ಗ :

ಅಂಗನವಾಡಿ ಕಾರ್ಯಕರ್ತೆಯಿಂದ ಕ್ರೈಸ್ತ ಧರ್ಮದ ಮತಾಂತರಕ್ಕೆ ಪ್ರಚೋದನೆ ಆರೋಪ ಒಂದು ಕೇಳಿ ಬಂದಿದೆ. ಗ್ರಾಮದಲ್ಲಿ ಲಂಬಾಣಿ ಜನಾಂಗದ ಮುಗ್ದರನ್ನು ಮತಾಂತರಕ್ಕೆ ಯತ್ನ ಅಂಗನವಾಡಿ ಕೇಂದ್ರದಲ್ಲೇ ಪೋಷಕರನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪ ಕೇಳಿ ಬಂದಿದೆ.

ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ ಚೌವ್ಹಾಣ್

ಮಕ್ಕಳಿಗೂ ಕ್ರೈಸ್ತ ಧರ್ಮದ ಕುರಿತು ಹೇಳುತ್ತಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸೊದ ಗ್ರಾಮಸ್ಥರು. ಶಿಕ್ಷಕಿಯನ್ನು ವಜಾ ಮಾಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ ಚವ್ಹಾಣ್ ನೇತೃತ್ವದಲ್ಲಿ ಪ್ರತಿಭಟನೆ. ಸಿಡಿಪಿಒಗೆ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಲಮಾಣಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಗೆ ಗ್ರಾಮದಿಂದ ಬಹಿಷ್ಕಾರ ಹಾಕುವ ಎಚ್ಚರಿಕೆ ಕೂಡ ನೀಡಿದ ಗ್ರಾಮಸ್ಥರು.

ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ ಚೌವ್ಹಾಣ್ ಹೇಳಿಕೆ ನೀಡಿದ್ದು, ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಮತಾಂತರ ಮಾಡೋಡು ಬೆಳಕಿಗೆ ಬಂದಿದೆ. ಡಿಸೆಂಬರ್ 25ರಂದು ನನ್ನ ಗಮನಕ್ಕೆ ಬಂತು. ಇವತ್ತೆ ಇದನ್ನು ತಡೆ‌ ಹಿಡಿಯಬೇಕು ಎಂದು ಚರ್ಚೆ ಮಾಡಿದ್ವಿ. ಗ್ರಾಮದಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಶೋಕಾಚರಣೆ ಇತ್ತು.

ಇದೇ ಗ್ರಾಮದ ಸುಮಿತ್ರಾ ಲಮಾಣಿ ತಾಲೂಕಿನ ಅನೇಕ ಗ್ರಾಮದಲ್ಲಿ ಮತಾಂತರ. ಗ್ರಾಮದ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ರು. ಅಂಗನವಾಡಿ ಸಹಾಯಕಿ ಹಾಗೂ ಗ್ರಾಮಸ್ಥರು ಇಂದು ಪಂಚಾಯತಿ ಮಾಡಿದ್ದಾರೆ.

ಈ ವೇಳೆಯಲ್ಲಿ ಸುಮಿತ್ರಾ ನಾವು ಅನೇಕ ವರ್ಷಗಳಿಂದ ಕ್ರೈಸ್ತ ಧರ್ಮ ಪಾಲನೆ ಮಾಡುತ್ತೇವೆ. ಈಗ ಧರ್ಮ ಬಿಡಲ್ಲ ಎಂದು ಹೇಳಿದ್ದಾರೆ. ನನಗೆ ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋದೆ. ರಾಮದುರ್ಗ ತಾಲೂಕಿನ ಸಿಡಿಪಿಓ ಕರೆಸಿ ಅಂಗನವಾಡಿ ಸಹಾಯಕ ಹದ್ದೆಯಿಂದ ಸುಮಿತ್ರಾ ತೆಗೆಬೇಕು ಎಂದು ಮನವಿ ಮಾಡಿದ್ದೇವೆ.

ಓಬಳಾಪೂರ ಗ್ರಾಮದಲ್ಲಿ ಸುಮಿತ್ರಾಗೆ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಗ್ರಾಮ ಪಂಚಾಯತಿಯಿಂದ ಸಿಗೋ ಸೌಲಭ್ಯ ನಿಲ್ಲಸಬೇಕು. ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ತಾಂಡಗಳನ್ನು ರಕ್ಷಣೆ ಮಾಡಬೇಕು, ಮತಾಂತರ ತಡೆಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ.