ಉ.ಕ ಸುದ್ದಿಜಾಲ ಅಥಣಿ :

ಭಾರತೀಯ ಪರಂಪರೆಯಲ್ಲಿ ಗೋಮಾತೆಗೆ ವಿಶೇಷವಾದ ಸ್ಥಾನವಿದೆ ಗೋಮಾತೆಯಲ್ಲಿ ಕೋಟ್ಯಂತರ ದೇವ – ದೇವತೆಗಳು ನೆಲೆಸಿರಿರುತ್ತಾರೆಂಬ ಅಪಾರ ಜನರ ನಂಬಿಕೆಯಾಗಿದೆ. ಇಂಥ ಗೋಮಾತೆಯನ್ನು ಕಳೆದುಕೊಂಡರೇ ಯಾರಾದರೂ ಸಹ ಕಣ್ಣೀರಿಡದೆ ಇರಲಾರರು.
  
ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ನೀಲಾಬಾಯಿ ಆಕಳೆ ಎಂಬುವವರು 30ವರ್ಷಗಳಿಂದ ಸ್ವಂತ ಮನೆಮಗಳಂತೆ ಸಾಕಿ ಸಲುಹಿದ ಗೋಮಾತೆಯನ್ನು ಕಳೆದುಕೊಂಡು ಇಡೀ ಕುಟುಂಬ ವರ್ಗ ಕಣ್ಣೀರಿಡುತ್ತಿದೆ. ಕುಟುಂಬದ ಬೆಳವಣಿಗೆಯಲ್ಲಿ ಅನೇಕ ವರ್ಷಗಳಿಂದ ಈ ಗೋವಿನ ಪಾಲೂ ಇದೆ ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡ ರೀತಿಯಲ್ಲಿ ಭಾವುಕರಾಗಿ ಗೋವನ್ನು ಪೋಷಿಸುತ್ತಿದ್ದ ನೀಲಾಬಾಯಿ ಕಣ್ಣೀರು ಹಾಕುತ್ತಿದ್ದಾರೆ.
  
30 ವರ್ಷಗಳ ಸುದೀರ್ಘವಾದ ಜೀವನದ ಪಯಣ ಮುಗಿಸಿ ಬಾರದೂರಿನ ಯಾತ್ರೆ ಆರಂಭಿಸಿದ ಗೋಮಾತೆಗೆ ಮುತ್ತೈದೆಯರು ಆರತಿ ಬೆಳಗಿ ಉಡಿತುಂಬಿ, ಅರಿಶಿನ, ಕುಂಕುಮ ಹಚ್ಚುವ ಮೂಲಕ ಗೌರವ ಪೂರ್ವಕ ಅಶ್ರುತರ್ಪಣದ ವಿದಾಯ ಸಲ್ಲಿಸಿ ಕಣ್ಣೀರಾದ ದೃಶ್ಯವು ನಶಿಸಿ ಹೋಗುತ್ತಿರುವ ಮಾನವನಲ್ಲಿಯ ಪರಸ್ಪರ ಬಾಂಧವ್ಯಕ್ಕೆ ಮಾದರಿಯಾದ್ದಂತೆ ಕಂಡುಬಂದಿತು. ಮೂಕ ಪ್ರಾಣಿಗಳೊಂದಿಗೆ ಮಾನವ ಘಳಿಸಿದ ಪ್ರೀತಿ ವಿಶ್ವಾಸ ಸ್ನೇಹ ಆತ್ಮೀಯತೆ ಎಂಥವರನ್ನೂ ಮೂಕರಂತೆ ಮಾಡಿದೆ.