ಉ.ಕ ಸುದ್ದಿಜಾಲ ಅಥಣಿ :

ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳು ಕಿಡ್ನಾಪ್ ಪ್ರಕರಣ ಮೂರು ಜನ ಆರೋಪಿ ಬಂಧಿಸಿ ಎರಡು ಮಕ್ಕಳನ್ನ ರಕ್ಷಣೆ ಮಾಡಿದ ಅಥಣಿ ಪೊಲೀಸರು. ಕಿಡ್ನಾಪ್ ಆರೋಪಿ ಕಾಲಿಗೆ ಪೊಲೀಸರಿಂದ ಪೈರಿಂಗ್ ಮಾಡಲಾಗಿದೆ.

ಮೂರು ಜನ ಆರೋಪಿ ಬಂಧಿಸಿ ಎರಡು ಮಕ್ಕಳನ್ನ ರಕ್ಷಣೆ ಮಾಡಿದ ಅಥಣಿ ಪೊಲೀಸರು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದ ಬಳಿ ಘಟನೆ. ಆರೋಪಿ ಸಾಂಬಾ ರಾವಸಾಬ್ ಕಾಂಬಳೆ(25) ಕಾಲಿಗೆ ಗುಂಡು ಹೊಡೆದು ಬಂಧನ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನ.

ಪಿಎಸ್ಐ ಮತ್ತು ಸಿಬ್ಬಂದಿಗಳ ಮೇಲೆ ಕಲ್ಲು ತೂರಿದ ಆರೋಪಿ. ಈ ವೇಳೆ ಪಿಎಸ್ಐ, ಓರ್ವ ಪೊಲೀಸ್ ಪೇದೆಯ ಕೈಗೆ ಗಾಯ. ಆತ್ಮ ರಕ್ಷಣೆಗೆ ಆರೋಪಿ ಸಾಂಬಾ ರಾವಸಾಬ್ ಮೇಲೆ ಪೊಲೀಸರಿಂದ ಪೈರಿಂಗ್.

ಗಾಯಾಳು ಪೊಲೀಸರು ಮತ್ತು ಆರೋಪಿ ಅಥಣಿ ತಾಲೂಕು ಆಸ್ಪತ್ರೆಗೆ ಶಿಪ್ಟ್. ರಾವಸಾಬ್ ಮಹಾರಾಷ್ಟ್ರದ ಕೊಲ್ಲಾಪುರ ಮೂಲ, ಚಿಕ್ಕೋಡಿ ಮೂಲದ ರವಿಕಿರಣ್ ಕಮಲಾಕರ್, ಶಾರುಖ್ ಶೇಖ್ ಬಿಹಾರ ಮೂಲದವ ವ್ಯಕ್ತಿ ಬಂಧನ.

ಮಕ್ಕಳ ತಂದೆ ವಿಜಯ್ ದೇಸಾಯಿ ಕೊಟ್ಟ ಹಣ ವಾಪಾಸ್ ಕೊಡದಿದ್ದಕ್ಕೆ ಕಿಡ್ನಾಪ್ ಆರೋಪ. ಹಣ ಡಬಲ್ ಮಾಡಿಕೊಡುವುದಾಗಿ ಆರೋಪಿಗಳ ಬಳಿ ಕೋಟ್ಯಾಂತರ ರೂಪಾಯಿ ಪಡೆದಿದ್ದ ವಿಜಯ್ ದೇಸಾಯಿ. ಹಣ ಕೊಡುವಂತೆ ಹಲವು ದಿನಗಳಿಂದ ವಿಜಯ್ ಗೆ ಪೀಡಿಸುತ್ತಿದ್ದ ಆರೋಪಿಗಳು.

ಹಣ ಕೊಡದಿದ್ದಾಗ ಮಕ್ಕಳನ್ನ ಕಿಡ್ನಾಪ್ ಮಾಡಿ ಕೊಟ್ಟ ಹಣ ವಾಪಾಸ್ ಗೆ ಡಿಮ್ಯಾಂಡ್. ವಿಜಯ್ ದೇಸಾಯಿಗೆ ಹಣ ಕೊಟ್ಟು ಮಕ್ಕಳನ್ನ ಬಿಡಿಸಿಕೊಂಡು ಹೋಗುವಂತೆ ಡಿಮ್ಯಾಂಡ್. ಈ ಆಧಾರದ ಮೇಲೆ ಆರೋಪಿಗಳ ಬೆನ್ನು ಬಿದ್ದಿದ್ದ ಅಥಣಿ ಪೊಲೀಸರು.

ನಿನ್ನೆ ಮಧ್ಯಾಹ್ನ ಮನೆಗೆ ನುಗ್ಗಿ ಸ್ವಸ್ತಿ(4), ವಿಯೋಮ್(3) ಕಿಡ್ನಾಪ್ ಮಾಡಿದ್ದ ಆರೋಪಿಗಳು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿತ್ತು.

ಮಹಾರಾಷ್ಟ್ರದ ಗಡಿಯಲ್ಲಿ ಮಕ್ಕಳನ ಅಪಹರಣ ಮಾಡಿಕೊಂಡು ಹೋಗಿದ್ದ ಆರೋಪಿಗಳ ಬೆನ್ನು ಹತ್ತಿ ಹೋದ ಪೋಲಿಸ ಅದಿಕಾರಿಗಳಾದ ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ , ಈ ವೇಳೆ ಪಿಎಸ್ಐ ಗಿರಮಲ್ಲಪ್ಪಾ ಉಪ್ಪಾರ , ಹಾಗೂ ಸಿಬ್ಬಂದಿಗಳಾದ ರಮೇಶ ಹಾದಿಮನಿ , ಶ್ರೀದರ ಬಂಗಿ , ಡಾಂಗೆ ಗಳ ಭಾಗಿಯಾಗಿದ್ದರು , ಆರೋಪಿಗಳನ್ನ ಹಿಡಿಯಲು ಹೋದ ವೇಳೆ ಪೋಲಿಸ ಅದಿಕಾರಿಗಳ ಮೇಲೆ ಕಲ್ಲುಗಳಿಂದ ದಾಳಿ ಮಾಡಲಾಗಿದೆ.

ಈ ವೇಳೆ ಪಿಎಸ್ಐ ಗಿರಮಲ್ಲಪ್ಪಾ ಉಪ್ಪಾರ , ಸಿಬ್ಬಂದಿಗಳಾದ ರಮೇಶ ಹಾದಿಮನಿ , ಡಾಂಗೆ ಗಾಯಗೊಂಡಿದ್ದಾರೆ , ಈ ವೇಳೆ ಪಿಎಸ್ಐ ಮಾಡಿದ ಗುಂಡಿನ ದಾಳಿಯಿಂದ ಆರೋಪಿ ಸಾಂಬಾ ಕಾಂಬಳೆಗೆ ಕಾಲಿಗೆ ಗುಂಡು ತಗಲಿದೆ ಆರೋಪಿಯನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ತಗೆದುಕೊಳ್ಳುತ್ತಿದ್ದಾರೆ .

ಕೇವಲ ಹತ್ತು ಗಂಟೆಯಲ್ಲಿ ಅಪಹರಣ ಪ್ರಕರಣ ಬೇದಿಸಿ , ಮಕ್ಕಳನ್ನ ಪಾಲಕರಿಗೆ ನೀಡಿದ ಅಥಣಿ ಪೋಲಿಸ ಅದಿಕಾರಿಗಳು ಯಶಸ್ಸಿಯಾಗಿದ್ದಾರೆ ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದರು.