ಉ.ಕ ಸುದ್ದಿಜಾಲ ರಾಮನಗರ :
ಇಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಒಟ್ಟು 113ಕೋಟಿ ಆಸ್ತಿ ಒಡೆಯ ನಿಖಿಲ್ ಕುಮಾರಸ್ವಾಮಿ. ನಿಖಿಲ್ ಬಳಿ ಒಟ್ಟು 78.15 ಕೋಟಿ ಮೌಲ್ಯದ ಚರಾಸ್ತಿ, 29.34ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
ರೇವತಿ ನಿಖಿಲ್ ಹೆಸರಲ್ಲಿ 5.49ಕೋಟಿ ಮೌಲ್ಯದ ಚರಾಸ್ತಿ, 43ಲಕ್ಷ ಮೌಲ್ಯದ ಸ್ಥಿರಾಸ್ತಿ. ಮಗ ಆವ್ಯಾನ್ ದೇವ್ ಹೆಸರಲ್ಲಿ 11ಲಕ್ಷ ಹಣ. ನಿಖಿಲ್ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಸಿಲ್ವರ್. ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್.
ನಿಖಿಲ್ ಹೆಸರಲ್ಲಿ 1 ಇನ್ನೋವ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟ ಕಾರು ಇದೆ. ನಿಖಿಲ್ ಕುಮಾರಸ್ವಾಮಿ ಬಿಬಿಎ ಪದವೀಧರ.
ನಿಖಿಲ್ ಹೆಸರಲ್ಲಿ ಒಟ್ಟು 70. 44 ಕೋಟಿ ಸಾಲ ಇದೆ. ರೇವತಿ ಹೆಸರಲ್ಲಿ 4ಕೋಟಿ 96ಲಕ್ಷ ಸಾಲ ಇದೆ.