ಉ.ಕ ಸುದ್ದಿಜಾಲ ಸಂಕೇಶ್ವರ :
ಬಿಜೆಪಿ ಪಕ್ಷದಲ್ಲಿ ಇರುವ ಬಗ್ಗೆ ಮುಂದಿನ ದಿನಗಳಲ್ಲಿ ಯೋಚನೆ ಮಾಡುತ್ತೇವೆ. ಸಧ್ಯ ಬಿಜೆಪಿ ಯಲ್ಲಿದ್ದೇವೆ, ಮುಂದುಕೂಡ ಅದರಲ್ಲೆ ಇರಬೇಕು ಎನ್ನುವ ಯೋಚನೆ ಇದೆ ಎಂದು ದಿ.ಉಮೇಶ ಕತ್ತಿ ಪುತ್ರ ನಿಖೀಲ ಕತ್ತಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ದಿನ ಬಂದಂತೆ ಪಕ್ಷದಲ್ಲಿ ಇರಬೇಕೋ ಬೇಡ ಎನ್ನುವದನ್ನ ಯೋಚನೆ ಮಾಡೋಣ ಹುಕ್ಕೇರಿ ಕ್ಷೇತ್ರದಿಂದ ಚುನಾವಣೆಗೆ ಯಾರು ನಿಲ್ಲಬೇಕು ಎನ್ನುವ ಚರ್ಚೆ ನಮ್ಮ ಕುಟುಂಬದಲ್ಲಿ ಇನ್ನೂ ನಡೆದಿಲ್ಲ.
ಸಹೋದರ ರಮೇಶ ಕತ್ತಿ ಸ್ಪರ್ಧೆ ಮಾಡತಾರಾ ಅಥವಾ ಅವರ ಪುತ್ರ ನಿಖೀಲ ಕತ್ತಿ ಸ್ಪರ್ಧೆ ಮಾಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ಇನ್ನೂ ಕೂಡ ನಮ್ಮ ಕುಟುಂಬ ದುಃಖದಲ್ಲಿದೆ.ಯಾರು ಸ್ಪರ್ಧೆ ಮಾಡಬೇಕು ಎನ್ನುವ ಅಪ್ಲಿಕೇಶನ್ ಹಾಕಿಲ್ಲ, ಜನರೇ ಈ ಬಗ್ಗೆ ಮಾತನಾಡುತ್ತಿದ್ದಾರೆ.
ಪಕ್ಷದಿಂದ ಚುನಾವಣೆ ಕುರಿತು ಯಾವುದೇ ಸೂಚನೆ ಬಂದಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ನಿಖೀಲ್ ಕತ್ತಿ ಹೇಳಿಕೆ ನೀಡಿದ್ದಾರೆ.