ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡರಹಟ್ಟಿ ಗ್ರಾಮದಲ್ಲಿ ವಾಸವಿರುವ ಪಿ.ಕೆ ನಾಗನೂರ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಮುಖಂಡ ಗಜಾನನ ಮಂಗಸೂಳಿ, ಅಗತ್ಯ ಆಹಾರದ ದಿನಸಿ ವಿತರಿಸಿ ನಿಮಗೆ ಶಾಶ್ವತವಾದ ನೆಲೆ ಸಿಗುವವರಿಗೆ ನಾವು ಹೋರಾಟ ಮಾಡುತ್ತೆವೆ. ನಿಮ್ಮ ಜೊತೆ ನಾನು ಯಾವತ್ತೂ ಇರುತ್ತೆನೇ ಹೆದರಬೇಡಿ ಎಂದು ಅಭಯವಿತ್ತರು.

ಮುಖಂಡ ಗಜಾನನ ಮಂಗಸೂಳಿ ಅವರು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೆರೆ ಸಂತ್ರಸ್ತರ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹುಟ್ಟೂರಿನ ನೆರೆ ಸಂತ್ರಸ್ತರಿಗೆ ಅನ್ಯಾಯವಾಗಿದೆ ಈಗಾಗಲೇ ನಾವು ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಭಿಕ್ಷಾಟನೆ ಮಾಡಿ ಪ್ರತಿಭಟನೆಯನ್ನೂ ಸಹ ಮಾಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೆರೆ ಸಂತ್ರಸ್ಥರನ್ನ ಉದ್ದೇಶಿಸಿ ಮಾತನಾಡಿದರು.

ಈ ವಿಷಯ ಕುರಿತು ಕಳೆದ ನಾಲ್ಕು ವರ್ಷದಿಂದ ನಾವು ನಮ್ಮ ಪಕ್ಷದ ವತಿಯಿಂದ ನಿರಂತರ ಪ್ರತಿಭಟನೆ ಮಾಡುತ್ತಿದ್ದೇವೆ. ದಪ್ಪ ಚರ್ಮದ ಅಧಿಕಾರಿಗಳು, ಜನಪ್ರತಿನಿಧಿಗಳು ಇವರ ಕಷ್ಟವನ್ನು ಆಲಿಸುತಿಲ್ಲ.

ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ನೆರೆ ಸಂತ್ರಸ್ತರ ಜೊತೆ ಸೇರಿ ನಮ್ಮ ಕಾಂಗ್ರಸ್  ಪಕ್ಷದಿಂದ ಉಗ್ರವಾಗಿ ಪ್ರತಿಭಟನೆ ಮಾಡುತ್ತೆವೆ ಎಂದರು.
    
ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಮುಂಖಡರಾದ ಶಿವು ಗುಡ್ಡಾಪುರ, ಸತ್ಯಪ್ಪ ಬಾಗನವರ ಸುನೀಲ ಸಂಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.