ಉ.ಕ ಸುದ್ದಿಜಾಲ ವಿಜಯಪುರ :

ಕಾಲುವೆ ಪಕ್ಕದಲ್ಲಿ ನವಜಾತ ಹೆಣ್ಣು ಶಿಶುಪತ್ತೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬಳಗಾನೂರು ಗ್ರಾಮದ ಕಾಲುವೆ ಬಳಿ ಪತ್ತೆ. ಹೆಣ್ಣು ಮಗು ಬೇಡವೆಂದೋ, ಅನೈತಿಕವಾಗಿ ಜನನವಾಗಿದೆಂದೋ ಶಿಶುವನ್ನು ಬಿಟ್ಟು ಹೋದ ತಾಯಿ..

ಜನಿಸಿದ ಬಳಿಕ ಬಟ್ಟೆಯಲ್ಲಿ ಸುತ್ತಿ ಕಾಲುವೆ ಬಳಿ ಎಸೆದು ಹೋಗಿರೋ ತಾಯಿ. ಕಾಲುವೆ ಬಳಿ ಮಗುವಿನ ರೋಧನ ಕೇಳಿ ನೋಡಿದಾಗ ಕಂಡ ಹೆಣ್ಣು ಶಿಶು. ಶಿವಣ್ಣ ಪಡಶೆಟ್ಟಿ ಎಂಬುವವರ ದೃಷ್ಟಿಗೆ ಬಿದ್ದ ನವಜಾತ ಶಿಶು. ಪೊಲೀಸರಿಗೆ ಹಾಗೂ ಸ್ಥಳಿಯರಿಗೆ ಮಾಹಿತಿ ನೀಡಿದ ಶಿವಣ್ಣ. ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ. ಮಗುವಿನ ತಾಯಿ ಪತ್ತೆಗೆ ಮುಂದಾದ ತಾಳಿಕೋಟೆ ಪೊಲೀಸರು.