ವಿ.ಕ ಸುದ್ದಿಜಾಲ ಕಾಗವಾಡ :

ಬರುವ ಗೌರಿ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಸರಕಾರದ ನಿಮಗಳನ್ನು ಪಾಲಿಸಿ ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಕಾಗವಾಡ ಠಾಣೆಯ ಪಿಎಸ್ಐ ಹಣಮಂತ ನರಳೆ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಗೌರಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ನಡೆದ ಗಣೇಶ ಮಂಡಳದ‌ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ  ಹಬ್ಬದ ಸಮಯದಲ್ಲಿ ಸರಕಾರದ ನಿಯಮ ಪಾಲನೆ ಮಾಡಿ ಶಾಂತಿಯುತ ಹಬ್ಬವನ್ನು ಆಚರಣೆ ಮಾಡಬೇಕು.

ಯಾವುದೇ ಕಾರಣಕ್ಕು ಡಾಲ್ಬಿಗಳ ಬಳಕೆ ಮಾಡುವಂತಿಲ್ಲಾ, ಸೌಂಡ್ ಸಿಸ್ಟಂ , ಧ್ವನಿ ವರ್ಧಕ ಬಳಕೆಗೆ ಪೊಲೀಸರಿಂದ ಮತ್ತು ವಿದ್ಯುತ್ ದೀಪ ಬಳಸಲು ಕಡ್ಡಾಯವಾಗಿ ಬೆಸ್ಕಾಂನಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಪ್ರಚೋದನಕಾರಿ ಘೋಷಣೆ ಕೂಗುವುದು, ಬಾಷಣ ಮಾಡುವಂಯಿಲ್ಲ, ಗಣೇಶ ವಿಸರ್ಜನೆ ಸರಕಾರ ನಿಯಮದಂತೆ ನಿಗಧಿತ ಸಮಯದೊಳಗೆ ಮಾಡಬೇಕು ವಿಸರ್ಜನೆ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ನಿಗಾವಹಿಸಿ.

ಪೋಲೀಸ ಇಲಾಖೆಯೊಂದಿಗೆ ಸಹಕರಿಸಬೇಕು ಸಾರ್ವಜನಿಕ ಗಣೇಶ ಮಂಡಳದವರು ಗಣೇಶ ಕೂರಿಸಲು ಗ್ರಾಮ ಹಾಗೂ ಪಟ್ಟಣ ಪಂಚಾಯತ ಪರವಾನಿಗೆ ಪಡೆದು ಪೋಲಿಸ ಪರವಾನಿಗೆ ಪಡೆದು ಶಾಂತಿಯುತವಾಗಿ ಆಚರಣೆ ಮಾಡಬೇಕು ನಿಯಮಗಳನ್ನು ಮೀರಿ ಯಾವ ಮಂಡಳದವರು ಆಚರಣೆ ಮಾಡಬಾರದು.

ಒಂದು ವೇಳೆ ಕಾನೂನು ಮೀರಿ ಆಚರಣೆ ಮಾಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು ಈ ಸಮಯದಲ್ಲಿ ತಾಲ್ಲೂಕಿನ ವಿವಿಧ ಗಣೇಶ ಮಂಡಳದ ಸದಸ್ಯರು ಇದ್ದರು.