ಉ.ಕ ಸುದ್ದಿಜಾಲ ಗೋಕಾಕ :
ಆಂಟಿಗಾಗಿ ಇಬ್ಬರ ನಡುವೆ ಗಲಾಟೆ. ವ್ಯಕ್ತಿಯೊಬ್ಬನ ಮೇಲೆ ಇನ್ನೊಬ್ಬನಿಂದ ಮಾರಣಾಂತಿಕ ದಾಳಿ. ಚಾಕುನಿಂದ ಕೈ, ಮೈ, ಎದೆ ಭಾಗಕ್ಕೆ ಚುಚ್ಚಿ ಗಾಯ. ಗಾಯಾಳು ಆನಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆ. ಆನಂದ್ ಜೊತೆಗೆ ಲಿವಿಂಗ್ ರಿಲೆಷನ್ ನಲ್ಲಿ ಇದ್ದ ಗೋಕಾಕ್ ಆಂಟಿ. ಬೆಂಗಳೂರಿನಲ್ಲಿ ಡ್ರೈವರ್ ಆಗಿರೋ ಆನಂದ. ಆಗಾಗ ಆಂಟಿ ಮನೆಗೆ ಬರ್ತಿದ್ದ ಗಾಯಾಳು ಆನಂದ.
ನಿನ್ನೆ ಆಂಟಿ ಮನೆಗೆ ಆನಂದ, ಈ ವೇಳೆ ಮನೆಯಲ್ಲಿ ಇದ್ದ ಮತ್ತೊಬ್ಬ. ಆಂಟಿ ಮನೆಯಲ್ಲಿ ಇದ್ದ ಮಂಜುನಾಥ ಕೋಳಿ ಎಂಬ ವ್ಯಕ್ತಿ. ಆನಂದ- ಮಂಜುನಾಥ ನಡುವೆ ಗಲಾಟೆ. ಆನಂದ ಮೇಲೆ ಚಾಕುವಿನಿಂದ ದಾಳಿ ಮಾಡಿದ ಮಂಜುನಾಥ. ಆನಂದ ಬಳಿ ಇದ್ದ ಚಾಕುವಿನಿಂದಲೇ ದಾಳಿ ಮಾಡಿರೋ ಮಂಜುನಾಥ.
ತೀವ್ರ ಗಾಯಗೊಂಡಿರೋ ಆನಂದ ಬಿಮ್ಸ್ ಆಸ್ಪತ್ರೆಗೆ ದಾಖಲು. ಗೋಕಾಕ್ ಪೊಲೀಸರು ಬಿಮ್ಸ್ ಆಸ್ಪತ್ರೆಗೆ ಭೇಟಿ ಮಾಹಿತಿ ಸಂಗ್ರಹ. ಆಂಟಿ ಸಹವಾಸ ಬಿಡು ಎಂದು ಹಿಂದೆ ವಾರ್ನ್ ಮಾಡಿದ್ದ ಮಂಜುನಾಥ ಎಂದು ಆನಂದ ಆರೋಪ. ಬಿಮ್ಸ್ ಬಂದು ಆನಂದ್ ಹೇಳಿಕೆ ದಾಖಲು ಮಾಡಿದ ಪೊಲೀಸರು.