ಉ.ಕ‌ ಸುದ್ದಿಜಾಲ ರಾಮದುರ್ಗ :

ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರುವುದಾಗಿ ಶಂಕಿಸಿದ ಪತಿ ತನ್ನ ಅಳಿಯನನ್ನೇ ಉಸಿರುಗಟ್ಟಿಸಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುನ್ನಾಳದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ನೀಲಪ್ಪ ಉಡಚಪ್ಪ ರೋಗನ್ನವರ(28) ಮೃತಪಟ್ಟವರು. ಫಕ್ಕೀರಪ್ಪ ಹನುಮಂತಪ್ಪ ಮನಿಹಾಳ ಕೊಲೆ ಮಾಡಿದ ಆರೋಪಿ.

ತನ್ನ ಪತ್ನಿಯೊಂದಿಗೆ ನೀಲಪ್ಪ ಅನೈತಿಕ ಸಂಬಂಧ ಹೊಂದಿರುವುದಾಗಿ ಶಂಕಿಸಿ, ಫಕ್ಕೀರಪ್ಪ ಕೊಲೆ ಮಾಡಿದ್ದಾನೆ. ಪುರಾವೆ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರಸ್ತೆ ಮೇಲೆ ತಂದು ಎಸೆದು, ಅಪಘಾತವಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದಾನೆ.

ತನಿಖೆ ಕೈಗೊಂಡಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಟಕೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.