ಉ.ಕ ಸುದ್ದಿಜಾಲ ರಾಯಬಾಗ :

ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಓಟ ಹಾಕಿದಂಗೆ, ಬಿಜೆಪಿಗೆ ಓಟ ಹಾಕಿದರೆ ದೇಶಕ್ಕೆ, ಕರ್ನಾಟಕ್ಕೆ ಓಟ ಹಾಕಿದಂಗೆ ಅಮೀತ ಶಾ ಹೇಳಿಕೆ ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ ಪ್ರತಿಕಿಯಿಸಿದ್ದಾರೆ.

ಪಂಚರತ್ನ ಯಾತ್ರೆಗೆ ಶನಿವಾರ ರಾಯಬಾಗ, ಕುಡಚಿ ಮತಕ್ಷೇತ್ರಕ್ಕೆ ಆಗಮಿಸಿದ ವೇಳೆ ಬ್ಯಾಕೂಡ ಗ್ರಾಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಏನ ರಾಜ್ಯಕ್ಕೆ ಒಳ್ಳೆದ ಮಾಡಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲೂ ಇದೆ ಕರ್ನಾಟಕದಲ್ಲೂ ಇದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಒಂಬತ್ತು ವರ್ಷದಿಂದ ಆಡಳಿತ ಮಾಡುತ್ತಿದೆ ನಿವೇನಾದರೂ ಕರ್ನಾಟಕಕ್ಕೆ ಒಳ್ಳೆದ ಮಾಡಿದ್ದೀರಾ?, ಯಾವುದಾದರೂ ನೀರಾವರಿ ಯೋಜನೆ ಕೊಟ್ಟಿದ್ದೀರಾ?, ಪ್ರವಾಹ ಸಂದರ್ಭದಲ್ಲಿ ಮನೆಗಳನ್ನ ನೀಡಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ಲೂಟಿ ಮಾಡ್ಡೀದಿರಿ, ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದ್ದೀರಿ, ನಮ್ಮ ಕರ್ನಾಟಕ ದುಡ್ಡ ತೊಗೊಂಡು ಕರ್ನಾಟಕಕ್ಕೆ ಕೊಡಬೇಕಾದದ್ದನ್ನ ಕೊಡದೆ. ಮಧ್ಯ ಪ್ರದೇಶ, ಬಿಹಾರ, ತೊಗೊಂಡ ಹಾಕಿದ್ದೀರಾ.

ಎಲ್ಲರೂ ಜೆಡಿಎಸ್‌ಗೆ ಮತ ಹಾಕಿ, ಜೆಡಿಎಸ್‌ಗೆ ಓಟ ಹಾಕಿದರೆ ಕರ್ನಾಟಕ ರಕ್ಷಣೆ ಮಾಡಲಿಕ್ಕೆ ಒಬ್ಬರು ಇರತಾರೆ ನಾನ ರಿಕ್ವೆಸ್ಟ ಮಾಡತೀನಿ. ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಕರ್ನಾಟಕದಲ್ಲಿ ನೆಲಕಚ್ಚುತ್ತವೆ ಯಾವುದೇ ಅನುಮಾನವಿಲ್ಲ. ಕರ್ನಾಟಕ 2023 ರಲ್ಲಿ ಎರಡು ಪಕ್ಷಗಳಿಗೆ ಜನರು ಇತಿಶ್ರೀ ಹಾಡಲಿದ್ದಾರೆ

ಹಾಸನ ಟಿಕೇಟ್ ವಿಚಾರ ನಾಳೆ ಅರಸಿಕೇರೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಕುರಿತು ಚರ್ಚೆ ಮಾಡುತ್ತೇನೆ ಈಗಾಗಲೇ 60 ಜನರ ಪಟ್ಟಿ ರೆಡಿ ಮಾಡಿದ್ದೇವೆ ಅದರ ಜೊತೆಗೆ ಹಾಸನ ಟಿಕೇಟ್ ಕೂಡಾ ಘೊಷಣೆ ಮಾಡುತ್ತೇವೆ

ಜೆಡಿಎಸ್ ಅಭ್ಯರ್ಥಿ ಗೆಲುವಿನ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ 123 ಸೀಟ್ ಗೆಲ್ಲುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷದಿಂದ ರಟಜ್ಯದಲ್ಲಿ ಸಂಘಟನೆ ಮಾಡಿದ್ದೇವೆ.