ಕಾಗವಾಡ :
ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಅನ್ನುವದನ್ನ ಚಾಲಕನ ಮಗ ಇಂದು ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ ಜಗದೀಶ ಅಡಹಳ್ಳಿ. ಈತ ಮಧ್ಯಮ ವರ್ಗದ ಶ್ರೀಕಾಂತ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 28 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗ್ರಾಮ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಜಗದೀಶ ಅಡಹಳ್ಳಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 440 ನೇ ರ್ಯಾಂಕ ಪಡೆಯುವುದರ ಮೂಲಕ ಮೋಳೆ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಸದ್ಯ ಇವರು ಆಂಧ್ರಪ್ರದೇಶ ಕೇಡರ್ ಐಪಿಎಸ್‌ಗೆ ಅಧಿಕಾರಿಯಾಗಿ ನೇಮಕ ವಾಗಿದ್ದ ಅವರು ಹೈದರಾಬಾದ್ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 11 ತಿಂಗಳ ತರಬೇತಿಯ ಮುಗಿಸಿ ನಂತರ ಈಗ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಗೆ ಟ್ರೇನಿ ASP ಆಗಿ ಸೇವಾ ಕಾರ್ಯ ಪ್ರಾರಂಭಿಸಿದ್ದಾರೆ.
ಕಾಗವಾಡ ತಾಲೂಕಿನ ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಜಗದೀಶ, 80.06% ಅಂಕ ಗಳಿಸಿದ್ದರು. ಪಿಯುಸಿ ಅಥಣಿ ತಾಲ್ಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 89% ಅಂಕ ಪಡೆದಿದ್ದರು. ಪದವಿಯನ್ನು ಇಲ್ಲಿನ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ 87% ಅಂಕಗಳೊಂದಿಗೆ ಪದಿಯಲ್ಲಿ ತೇರ್ಗಡೆಯಾಗಿ 2014 ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.
ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ ಪಡೆದಿದ್ದಾರೆ. ಬಡವನಾಗಿ ಹುಟ್ಟಿದ ಜಗದೀಶ ಅವರು ತಂದೆ ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಿನ ಜಗದೀಶ ತನ್ನ ತಂದೆ ಶ್ರೀಕಾಂತ ಅವರ ಜೊತೆ ಕಾರ್ಖಾನೆಗೆ ಹೋದಾಗ 2013ರಲ್ಲಿ ವಿಧಾನಸಭೆ ಚುನಾವಣಾ ಕೆಲಸಕ್ಕೆ ತಂದೆ ಶ್ರೀಕಾಂತ ಚಾಲಕರಾಗಿ ನಿಯೋಜನೆಗೊಂಡಿದ್ದರು. ಆಗ ಐಎಎಸ್ ಅಧಿಕಾರಿಗಳು ಆಡುತ್ತಿದ್ದ ಮಾತುಗಳು ಅವರಿಗೆ ನೀಡುವ ಗೌರವ ನನಗೆ ಸ್ಫೂರ್ತಿ ನೀಡಿದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಪ್ರಯತ್ನ ಮಾಡಿದೆ ಆಗ ನನ್ನ ತಂದೆ ತಾಯಿ ದಿನನಿತ್ಯ ಕೂಲಿ ಮಾಡಿ ನನಗೆ ಓದಲು ಸಹಕಾರ ನೀಡಿದ್ದಾರೆ.
ನಾನು ಬಡವನಾಗಿರಬಹುದು ವಿದ್ಯೆ ಹಾಗೂ ಸತತ ಪ್ರಯತ್ನದಿಂದ ಏನಾದರೂ ಸಾಧಿಸಬಹುದು ಎನೊದಕ್ಕೆ ನಾನಾ ಉದಾಹರಣೆ. ಬಡವರು ಯಾರು ದೊಡ್ಡ ಹುದ್ದೆಗೆ ಹೋಗಬಾರದು ಎನ್ನುವ ಮಾತು ಯಾರಿಂದಲೂ ಬರಬಾರದು ಎಂದು ಕೆಎಎಸ್ ಓದುವ ಬಡ ಮಕ್ಕಳಿಗೆ ನಾನೆ ಉದಾಹರಣೆ ಎನ್ನುತ್ತಾರೆ ಜಗದೀಶ ಅಡಹಳ್ಳಿ. 2014ರಲ್ಲಿ ನವದೆಹಲಿಯಲ್ಲಿ ಐಎಎಸ್ ಕೋಚಿಂಗ್ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದ ಜಗದೀಶ, 5 ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದಾರೆ. ಸತಯ ಪ್ರಯತ್ನದಿಂದ ಆರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾರೆ.
ನನ್ನ ಮಗ ಯುಪಿಎಸ್‌ಸಿ ಹುದ್ದೆಗೆ ಆಯ್ಕೆಯಾಗಿದ್ದಾನೆ ನನಗೆ ತುಂಬಾ ಖುಷಿಯಾಗಿದೆ. ನಾನು ಒಬ್ಬ ಸಾಧಾರಣ ಚಾಲಕ ಈಗ ನನ್ನ ಮಗ ಯುಪಿಎಸ್‌ಸಿ ಪಾಸಾಗಿದ್ದು ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂತೋಷದ ವಿಷಯ ನಮ್ಮ ಕೃಷ್ಣಾ ಸಕ್ಕರೆ ಕಾರ್ಖಾನೆಯವರ ಸಲಹೆ ಪಡೆದುಕೊಂಡು ನಾನು ನನ್ನ ಮಗನಿಗೆ ವಿದ್ಯಾಭ್ಯಾಸ ನೀಡಿದ್ದೇನೆ ಈಗ ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದು ನಮ್ಮಗೆ ಹೆಮ್ಮೆಯ ವಿಷಯ ಅನ್ನುತ್ತಾರೆ ಜಗದೀಶ ಅವರ ತಂದೆ ಶ್ರೀಕಾಂತ.
ಇಂದಿನ ಅಧುನಿಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಛಲವಿದ್ದರೆ ಸತತ ಓದು ಮತ್ತು ಪರಿಶ್ರಮ ನಮ್ಮ ಕನಸುಗಳನ್ನು ನನಸು ಮಾಡುವದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕೆ ಜಗದೀಶ ಅಡಹಳ್ಳಿ ಮಾದರಿಯಾಗಿದ್ದಾರೆ. ಐಎಎಸ್ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಇಂದು ಚಾಲಕನ ಮಗ ಮಾದರಿಯಾಗಿದ್ದು ದಿನವೂ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಜಗದೀಶ ಈಗ ಇನ್ನಷ್ಟು ಬಡ ಮಕ್ಕಳು ಉತ್ತಮ ಹುದ್ದೆಗಳನ್ನು ಅಲಂಕರಿಸಿ ತಮ್ಮ ಉದಾತ್ತ ಕೊಡುಗೆಯನ್ನು ಸಮಾಜಕ್ಕೆ ನೀಡುವಂತಾಗಲಿ ಅನ್ನುವದು ನಮ್ಮ ಆಶಯ.