ಉತ್ತರ ಕರ್ನಾಟಕ ಸುದ್ದಿ ಮಂಗಳೂರು :

ಹಲವಾರು ದಿನಗಳಿಂದ ಚಿರತೆ ಸುತ್ತಾಡುವುದನ್ನ ಕಂಡು ಭಯಭಿತರಾಗಿದ್ದ ಜನರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳೂರು ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಬೋನಿಗೆ ಬಿದ್ದ ಚಿರತೆ. ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ಈ ಘಟನೆ ನಡೆದಿದೆ.

ಮೂಲ್ಕಿ , ಕಿನ್ನಿಗೋಳಿ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ, ಚಿರತೆ ಓಡಾಟದಿಂದ ಭಯಭೀತರಾಗಿದ್ದ ಜನ. ಚಿರತೆ ಇರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದ ಸ್ಥಳೀಯರು. ಎರಡು ದಿನಗಳ ಹಿಂದೆ ಕಿನ್ನಿಗೋಳಿ ಸಮೀಪದ ತಾಳಿಪಾಡಿಯಲ್ಲಿ ಬೋನು ಇಟ್ಟಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು.