ಉಡುಪಿ :

ನ್ಯೂ ಇಯರ್ ಪಾರ್ಟಿಗೆ ಗಾಂಜಾ ತರುತ್ತಿದ್ದ ಯುವಕನೋರ್ವನನ್ನು ಉಡುಪಿಯ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಕುಂದಾಪುರ ವಿಠ್ಠಲವಾಡಿ ಮೂಲದ ವಿಶ್ವಪ್ರಸನ್ನ ಗೋಡೆ (26) ಬಂಧಿತ ಆರೋಪಿ. ಈತನಿಂದ 1 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷದಂದು ಮೋಜುಮಸ್ತಿ ಮಾಡುವ ಸಲುವಾಗಿ ಹೈದರಾಬಾದ್‌‌ನಿಂದ ಕುಂದಾಪುರಕ್ಕೆ ಬಸ್ ಮೂಲಕ ಗಾಂಜಾ ತರುತ್ತಿದ್ದ ಬಗ್ಗೆ ಕುಂದಾಪುರ ಡಿವೈಎಸ್ಪಿ ಅವರಿಗೆ ಖಚಿತ ಮಾಹಿತಿ‌ ಲಭಿಸಿದೆ. 

ಬಸ್ರೂರು ಮೂರುಕೈ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ವಿಶ್ವಪ್ರಸನ್ನನನ್ನು ವಶಕ್ಕೆ ಪಡೆದು ಆತನಿಂದ ಮಾರಾಟಕ್ಕಾಗಿ ತಂದಿದ್ದ 1 ಕಿಲೋ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.