ಉ.ಕ ಸುದ್ದಿಜಾಲ ವಿಜಯಪುರ :
ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು. ಜಾತ್ರಾ ರಥೋತ್ಸವ ವೇಳೆ ಅವಘಡ, ಯುವಕ ಸ್ಥಳದಲ್ಲೆ ಸಾವು. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದಲ್ಲಿ ಘಟನೆ.
ದೇವೇಂದ್ರ ಬಡಿಗೇರ್ (24) ರಥದ ಚಕ್ರ ಹರಿದು ಸಾವು. ದುರಂತದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ. ಘನ ಗುರುಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಅವಘಡ. ರಥವನ್ನ ಎಳೆಯುವ ವೇಳೆ ಆಯತಪ್ಪಿ ಚಕ್ರದಡಿಗೆ ಸಿಕ್ಕ ಯುವಕ.
ಗಂಭೀರಗಾಯಗೊಂಡ ದೇವೇಂದ್ರನನ್ನ ಆಸ್ಪತ್ರೆಗೆ ಸಾಗಿಸಲು ಯತ್ನ. ದಾರಿ ಮಧ್ಯೆ ದೇವೇಂದ್ರ ಸಾವು. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.