ಉತ್ತರ ಕರ್ನಾಟಕ ಸುದ್ದಿಜಾಲ ವಿಜಯಪುರ :

ಸ್ವಪಕ್ಷೀಯ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಯತ್ನಾಳ್ ವಾಗ್ದಾಳಿ, ವಿಜಯಪುರಕ್ಕೆ ಯಾರು ಉಸ್ತುವಾರಿನೇ ಇಲ್ಲ ಈಗ ಇರೋರು ಜೆಂಡಾ (ಧ್ವಜ) ಹಾರಿಸೋಕೆ ಮಾತ್ರ ಬರ್ತಾರೆ. ಕೆಡಿಪಿ‌ ಮೀಟಿಂಗ್ ಮಾಡೋಕೆ ಬರೊಲ್ಲ. ಬರೀ ಕೊರೊನಾ ಹಾಗೂ ಧ್ವಜ ಹಾರಿಸಲು ಮಾತ್ರ ಉಸ್ತುವಾರಿ ಸಚಿವರು ಎಂದ ಯತ್ನಾಳ.

ಜೊಲ್ಲೆ ವಿರುದ್ಧ ಹೆಸರು ಹೇಳದೆ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಆದಷ್ಟು ಬೇಗ ಉಸ್ತುವಾರಿ ಚೆಂಜ್ ಎಂದ ಯತ್ನಾಳ. ಜನವರಿ 14 ರ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗುತ್ತೆ. ಸಂಪುಟ ಪುನರ್ರಚನೆಯ ಬಗ್ಗೆ ಸಿಎಂ ಸುಳಿವು ಕೊಟ್ಟಿದ್ದಾರೆ. ಎಲ್ಲ ಜಿಲ್ಲೆಗೂ ಸೂಕ್ತ ಪ್ರಾತಿನಿಧ್ಯ ಸಿಗಲಿದೆ. ಸೂಕ್ತವಾದ ಉಸ್ತುವಾರಿ ಸಚಿವರು ಆಗ್ತಾರೆ. ನನಗೆ ಪಕ್ಷ ಸಿಹಿ ಸುದ್ದಿ ಕೊಡಲಿದೆ ಎಂದ ಯತ್ನಾಳ.