ಬೆಂಗಳೂರು :

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್ ನಡೆಸುತ್ತಿರುವ ಪುಂಡಾಟವನ್ನ ಖಂಡಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳು ಡಿಸೆಂಬರ್ 22 ರಂದು ಘೋಷಣೆ ಮಾಡಿದ್ದವು. ಆದರೆ ಇದಕ್ಕೆ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಹೀಗಾಗಿ ಇಂದು ಸಂಜೆ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಹಾಗೂ ಉಮೇಶ್ ಬಣಕಾರ್ ಸೇರಿ ಹಲವು ಮುಖಂಡರು ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು. ಭೇಟಿ ಬಳಿಕ ನಾಳೆ ಕರ್ನಾಟಕ ಬಂದ್ ಮಾಡುವ ನಿರ್ಧಾರವನ್ನ ಹಿಂಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.