ಉ.ಕ ಸುದ್ದಿಜಾಲ ಯಾದಗಿರಿ :

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ದೋರನಹಳ್ಳಿಯ ಹಿರೇಮಠ ಸ್ವಾಮೀಜಿ ಹೃದಯಾಘಾತದಿಂದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ (48) ಲಿಂಗೈಕ್ಯರಾಗಿದ್ದಾರೆ.

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಯಾದಗಿರಿಗೆ ಬರುವಾಗ ಹೃದಯಾಘಾತದಿಂದ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ ರೈಲ್ವೆ ನಿಲ್ದಾಣದಲ್ಲೇ ಕುಸಿದು ಬಿದಿದ್ದ ಸ್ವಾಮೀಜಿ.

ಸ್ವಾಮೀಜಿಗೆ ಬದುಕುಳಿಸಲು ಪ್ರಯತ್ನಿಸಿದ ಜೊತೆಗೆ ಹೋದ ಭಕ್ತರು. ಆದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯೆ ಲಿಂಗೈಕ್ಯ ಕಾರ್ಯಕ್ರಮಕ್ಕೆ ಗಣ್ಯರನ್ನ ಆಹ್ವಾನ ನೀಡಲು ಹೋಗಿದ್ದ ದೋರನಹಳ್ಳಿ ಹಿರೇಮಠ ಸ್ವಾಮೀಜಿ.

ಮುಂದಿನ ತಿಂಗಳಲ್ಲಿ ತಮ್ಮ 25ನೇ ಪಟ್ಟಾಧಿಕಾರ ಮಹೋತ್ಸವ ಆಯೋಜನೆ ಮಾಡಿದ್ರು ಇದೇ ಕಾರ್ಯಕ್ರಮಕ್ಕಾಗಿ ಬಿ.ವೈ. ವಿಜಯೇಂದ್ರಗೆ ಆಹ್ವಾನ ನೀಡಲು ಬೆಂಗಳೂರಿಗೆ ಹೋಗಿದ್ದ ಸ್ವಾಮೀಜಿ.