ಉ.ಕ ಸುದ್ದಿಜಾಲ ಹಾವೇರಿ :

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಡದಿರುವ ವಿಚಾರ. ಇಂದು ಹಾವೇರಿಯಲ್ಲಿ ಜಯಮೃತ್ಯಂಜಯ ಸ್ವಾಮಿಗಳ ನೇತೃತ್ವದಲ್ಲಿ ಮಹತ್ವದ ಸಭೆ ಮಾಡಿದ ಸಮಾಜದ ಮುಖಂಡರು. ಸಭೆಯಲ್ಲಿ ಕಠೋರ ನಿರ್ಣಯ ತೆಗೆದುಕೊಂಡ ಶ್ರೀಗಳು ಹಾಗೂ ವಿಜಯನಾಂದ ಕಾಶಪ್ಪನವರ. ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮೃತ್ಯುಂಜಯ ಸ್ವಾಮೀಜಿ.

ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ  ಅನ್ನೋ ಅಂತ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು. ಘೋಷಣೆ ಮಾಡೇ ಬಿಡ್ತಾರೆ ಅಂತ ಬೆಳಗಾವಿಯಲ್ಲಿ ಜನ ಕುಳಿತಿದ್ರು ಜನ ರೆಡಿಯಾಗೇ ಬಂದಿದ್ರು. ಕ್ರಾಂತಿಕಾರಿ‌ ಹೋರಾಟಕ್ಕೆ ಸಿದ್ದರಾಗಿ ಬಂದಿದ್ರು ಸಂಪುಟ ಸಭೆಯಲ್ಲಿ ನಿರ್ಣಯ ತಗೆದುಕೊಂಡು, ಡಿ.29 ಕ್ಕೆ ಸಿಹಿ ಸುದ್ದಿ ಕೊಟ್ಟೇ ಕೊಡ್ತಾರೆ ಅಂತ ಅನ್ಕೊಂಡಿದ್ದೆವು.

ಆದರೆ 2A ಕೇಳಿದರೆ 2D ಕೊಡ್ತೇವೆ ಅಂದರು,ಏನನ್ನೂ ಸ್ಪಷ್ಟವಾಗಿ ಹೇಳಲೇ ಇಲ್ಲ. ಸರ್ಕಾರದ ಅದೇಶ ಏನೂ ಅಂತಾನೂ ಹೇಳಿಲ್ಲ,ಮತ್ತೆ ಇದೆ ಜನವರಿ 12 ಗಡುವು ಕೊಟ್ಟಿದ್ದೇವೆ. ಮತ್ತೆ ಹೋರಾಟಕ್ಕೆ ಸರ್ಕಾರದವರೇ ನಮ್ಮನ್ನು ಅಣಿಗೊಳಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟ ಜಯಮೃಂತುಜಯ ಸ್ವಾಮೀಜಿ ಹೇಳಿಕೆ

ಜನೇವರಿ 13 ಕ್ಕೆ ಅದೇ ಸಿಎಂ ಮನೆ ಮುಂದೆ ಹೋರಾಟ ಮಾಡ್ತೇವೆ. ಒಂದು ದಿನದ ಸತ್ಯಾಗ್ರಹ ಆರಂಭಿಸುತ್ತೇವೆ. ಚುನಾವಣೆ ಬರ್ತಾ ಇದ್ದರ ಕೂಡಾ ನಮ್ಮ ಮುಖಂಡರು ನಿಮ್ಮ ಹೋರಾಟದಲ್ಲಿ ನಿಮ್ಮ ಜೊತೆ ಇರ್ತೇವೆ ಅಂತ ಹೇಳಿದ್ದಾರೆ. ಜನವರಿ 14,15 ಸಂಕ್ರಾಂತಿ ಹೋರಾಟಕ್ಕೆ ನ್ಯಾಯ ಪಡೆದ ಮೇಲೆ‌ಯೇ ನಾವು ಬೇವು ಬೆಲ್ಲ ತಿನ್ನೋಣ.

ಶಿಗ್ಗಾವಿ ಸಿಎಂ ಮನೆ ಮುಂದೆನೇ ಸಂಕ್ರಾಂತಿ ಮಾಡೋಣ. ಹೀಗಾಗಿ ರಾಜ್ಯದ ಒಂದು ಕೋಟಿಗೂ ಅಧಿಕ ಪಂಚಮಸಾಲಿ ಸಮಾಜದ ಜನರಿಗೆ ಕರೆ ಕೋಡ್ತಾ ಇದೆವಿ. ಅಂದು ಜನವರಿ 13 ಕ್ಕೆ ನೀವೆಲ್ಲಾ ಬರಬೇಕು. ಜ.12 ರಂದು ಟೂಡಿ ಯಲ್ಲಿ ಏನೇನೂ ಮೀಸಲಾತಿ ಇದೆ ಎಂದು ಹೇಳಬೇಕು. ಇಲ್ಲವಾದರೆ ಇದು ನಮ್ಮ ಕೊನೆಯ ದೊಡ್ಡ ಹೋರಾಟ.

ಇಲ್ಲಿ 2023 ರ ಚುನಾವಣೆಯಲ್ಲಿ ನಮ್ಮ ಸಮಾಜದಂದು ಏನೇನೂ ಮಾಡ್ತೇವಿ ಎಂದು ನಿರ್ಧಾರ ಪ್ರಕಟ ಮಾಡಿಯೇ ಹೋಗುತ್ತೇವೆ. ಮತ್ತೊಮ್ಮೆ ಸರ್ಕಾರಕ್ಕೆ ಕಠೋರ ಎಚ್ವರಿಕೆ ನೀಡಿದ ಜಯಮೃತ್ಯಂಜಯ ಶ್ರೀಗಳು.