ಉ.ಕ ಸುದ್ದಿಜಾಲ ಹುಕ್ಕೇರಿ :
ಬೆಳಗಾವಿ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಳಿಕ ರಮೇಶ ಕತ್ತಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ನೋವಾಗಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. 42 ವರ್ಷದಲ್ಲಿ ಇಂಥ ಪರಿಸ್ಥಿತಿ ಬಂದಿರಲಿಲ್ಲ ಎಲ್ಲರ ಜೊತೆ ಚರ್ಚೆ ಮಾಡಿ ರಾಜೀನಾಮೆ ಕೊಟ್ಟಿದ್ದೇನೆ ಎಂದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸ್ವ ಗ್ರಾಮ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮೇಶ ಕತ್ತಿ ಮಾತನಾಡಿ 27 ವರ್ಷ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೆ 60 ವರ್ಷ ಆದ ಕಾರಣ ರಾಜೀನಾಮೆ ನೀಡಿದ್ದೇನೆ. ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ಇದ್ದೇವೆ ಎಂದರು.
ಎಲ್ಲರ ಜೊತೆ ವಿಚಾರ ಮಾಡಿ ರಾಜೀನಾಮೆ ಮಾಡಿದ್ದೇನೆ. ಅವಿಶ್ವಾಸ ನಿರ್ಣಯ ಮಾಡುವ ಚರ್ಚೆ ಆಗಿಲ್ಲ. ಯಾವೂ ನಿರ್ದೇಶಕರು ನನ್ನ ವಿರೋಧಿ ಕೆಲಸ ಮಾಡಿಲ್ಲ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ.
ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ. ಹೊಸ ಸದಸ್ಯತ್ವ ಮಾಡುವ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿತ್ತು ಅದು ಅತಿರೇಕಕ್ಕೆ ಹೋದ ಕಾರಣ ರಾಜಕಾರಣ ಒತ್ತಡದಿಂದ ನಾನೇ ನಿರ್ಧಾರ ಮಾಡಿದ್ದೇನೆ ಸದಸ್ಯತ್ವ ಮಾಡುವ ಕುರಿತು ಕನಕ್ಲೂಸನ ಆಗದ ಕಾರಣ ರಾಜೀನಾಮೆ ನೀಡಿದ್ದೇನೆ
42 ವರ್ಷದಲ್ಲಿ ನನ್ನ ಕಡೆನೂ ತಪ್ಪಾಗಿದ್ದರೂ ಅದು ಬ್ಯಾಂಕಿನ ಹಿತದೃಷ್ಟಿಯಿಂದ ಮಾಡಿರಬಹದು. ತಪ್ಪಿನಿಂದ ನೋವಿದ್ದರೇ ವಿಷಾಧ ವ್ಯಕ್ತಪಡಿಸುತ್ತೇನೆ. ಬ್ಯಾಂಕ್ ಸದೃಡವಾಗಿತ್ತು ಯಾರು ಹಣ ವಿತ್ ಡ್ರಾ ಮಾಡಬೇಡಿ ನನ್ನ ರಾಜೀನಾಮೆಯಿಂದ ಇಟ್ಟಂಥ ಠೇವು ವಾಪಸ್ಸ ಪಡೆಯಬಾರದು ಎಂದು ಮನವಿ ಮಾಡಿದ ರಮೇಶ ಕತ್ತಿ
ಸಿಎಂ ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿದ ರಮೇಶ ಕತ್ತಿ :
ಸಿದ್ದರಾಮಯ್ಯ ಸ್ವಚ್ಚ ಧಕ್ಷ ಆಡಳಿತಗಾರ, ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದನಿಂದ ಸಿಎಂ ಸಿದ್ದರಾಮಯ್ಯ ಗುಣಗಾನ. ಬಿಜೆಪಿ ಮಾಜಿ ಸಂಸದ ರಮೇಶ ಕತ್ತಿ ಹೇಳಿಕೆ
ಸಿದ್ದರಾಮಯ್ಯ ಈಗ ಅವರ ಮೇಲೆ ಹಗರಣದ ಗೂಬೆ ಬಂದಿದೆ ಇಂದಿನ ರಾಜಕಾರಣ ಬಹಳ ಬದಲಾವಣೆ ಆಗಿದೆ. ಆದರೆ ಅಂದಿನ ರಾಜಕಾರಣದ ವ್ಯಾಖ್ಯಾನ ಇಂದಿನ ರಾಜಕಾರಣ ವ್ಯಾಖ್ಯಾನ ಬೇರೆ ಇದೆ ಯಡಿಯೂರಪ್ಪ, ಕುಮಾರಸ್ವಾಮಿ ಅವರ ಮೇಲೆಯೂ ಕಳಂಕ ಬಂದಿದೆ.
ಇಂದಿನ ರಾಜಕಾರಣದಲ್ಲಿ ಯಾರು ತಾವು ಬೆಳೆಯಲು ಪ್ರಯತ್ನ ಮಾಡುತ್ತಿಲ್ಲ. ಬೇರೆ ಅವರನ್ನ ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಕತ್ತಿ ಸಹೋದರರು ನೋಡದ ಪಕ್ಷ ಇಲ್ಲ. ನಾವು ಎಲ್ಲ ಪಕ್ಷಗಳ ಜೊತೆ ಒಡನಾಟ ಹೊಂದಿದ್ದೇವೆ. ಇಂದಿನ ರಾಜಕಾರಣದ ಸ್ಥಿತಿ ಸರಿಯಿಲ್ಲ ಎಂದ ರಮೇಶ ಕತ್ತಿ.
ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಹಿರಿಯರ ಜೊತೆ ಚರ್ಚಿಸಿ ಮುಂದಿನ ರಾಜಕಾರಣದ ತೀರ್ಮಾನ ಮಾಡುತ್ತೇವೆ ಕತ್ತಿ ರಾಜಕಾರಣದಲ್ಲಿ ಇದ್ದರೂ ಇರದೇ ಇದ್ದರೂ ಜನರ ಪರ ಇದೆ ಎಂದರು.