ಉತ್ತರ ಕರ್ನಾಟಕ ಸುದ್ದಿಜಾಲ ದಾವಣಗೆರೆ :

ಅಶ್ವಥ್ ನಾರಾಯಣ್ ವಿರುದ್ದ ಡಿ.ಕೆ.ಸುರೇಶ್, ಕಾಂಗ್ರೇಸ್ ಮುಖಂಡರ ಗಲಾಟೆ ಹಿನ್ನೆಲೆ‌ ಡಿ ಕೆ ಸುರೇಶ್ – ಡಿ ಕೆ ಶಿವಕುಮಾರ್‌ಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಶಾಸಕ ರೇಣುಕಾಚಾರ್ಯ. ಶಿವಕುಮಾರ್ ಬಾಡಿಗೆ ಗೂಂಡಾಗಳು ಗಲಾಟೆ ಮಾಡಿದ್ದಾರೆ. ನಿಮ್ಮ ತಮ್ಮ ಡಿಕೆ ಸುರೇಶ್ ಗೂಂಡಾ, ನಿಮ್ಮ ಪಕ್ಷದ ಗೂಂಡಾಗಳು ಗಲಾಟೆ ಮಾಡಿದ್ದಾರೆ.

ಶಾಸಕ ರೇಣುಕಾಚಾರ್ಯ ಬಹಿರಂಗ ಬೆದರಿಕೆ

ನೀವು ಅಶ್ವತ್ಥ ನಾರಾಯಣ್ ಬಳಿ ಕ್ಷಮೆ ಕೇಳಬೇಕು. ನೀವು ಬಿಜೆಪಿಯ ಬೆಶರತ್ಥ ಕ್ಷೇಮೆ ಕೇಳಬೇಕು. ಇಲ್ಲವಾದರೆ ನಾವು ಕೈಗೆ ಬಳೆಯನ್ನ ತೊಟ್ಟುಕೊಂಡಿಲ್ಲ. ನಾವು ಬೆಂಗಳೂರಿಗೆ ಬಂದು ತಕ್ಕ ಪಾಟ ಕಲಿಸುತ್ತೇವೆ. ಡಿಕೆ ಸಹೋದರರಿಗೆ ಶಾಸಕ ರೇಣುಕಾಚಾರ್ಯ ಬಹಿರಂಗವಾಗಿ ಬೆದರಿಕೆ. ಹೊನ್ನಾಳಿಯಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ ವೇಳೆ ಬಹಿರಂಗವಾಗಿ ಬೆದರಿಕೆ. ಈ ವೇಳೆ ಡಿ.ಕೆ.ಸುರೇಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಿದ ಬಿಜೆಪಿ ಕಾರ್ಯಕರ್ತರು. ಡಿ ಕೆ ಸುರೇಶ್ ಕ್ಷಮೆ ಕೇಳುವಂತೆ ಬಿಜೆಪಿ ಕಾರ್ಯಕರ್ತರ ಪಟ್ಟು.