ಉತ್ತರ ಕರ್ನಾಟಕ ಸುದ್ದಿಜಾಲ ಬೆಳಗಾವಿ :

ಗ್ರಾಮ ಪಂಚಾಯತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಸದಸ್ಯರಿಂದ ಹಲ್ಲೆ. ಚಪ್ಪಲಿ ತೋರಿಸಿ ಹಲ್ಲೆ ಮಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದೆ.

ಗ್ರಾಮ ಪಂಚಾಯತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಸದಸ್ಯರಿಂದ ಹಲ್ಲೆ.

ಹೂಲಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರೂಪಾಕ್ಷ ತೊರಗಲ್ ಹಾಗೂ ಅವನ ಬೆಂಬಲಿತ ಸದಸ್ಯರಿಂದ ಹಲ್ಲೆ. ಸಂಗಪ್ಪ ಗೂಡಗಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. 2020-21 ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ‌ ದುರುಪಯೋಗ, ಅವ್ಯವಹಾರವಾಗಿರುವ ಆರೋಪ ವಿಚಾರವಾಗಿ ಅಧ್ಯಕ್ಷ ವಿರೂಪಾಕ್ಷ ತೊರಗಲ್, ಪಿಡಿಓ ಫಕ್ಕಿರವ್ವ ಹನಸಿ ವಿರುದ್ದ ಹಣ ದುರುಪಯೋಗ ಆರೋಪ.

ಸಂಗಪ್ಪ ಗೂಡಗಾರ್ ಹಲ್ಲೆಗೊಳಗಾದ ವ್ಯಕ್ತಿ

ಗ್ರಾಮ ಪಂಚಾಯತಿಯಲ್ಲಿ ಅಕ್ರಮ ಆಗಿರುವ ಬಗ್ಗೆ ಜಿ.ಪಂ, ಸಿಇಓ ಅವರಿಗೆ ಮನವಿ ಮಾಡಿದ್ದ ಸಂಗಪ್ಪ ಗೂಡಗಾರ್ ಅಕ್ರಮದ ತನಿಖೆ ಮಾಡುವಂತೆ ತಾಲೂಕು ಪಂಚಾಯತಿ ಸಿಇಓ ಆದೇಶ ಮಾಡಿದ್ರು. ಈ ಹಿನ್ನೆಲೆಯಲ್ಲಿ ನಿನ್ನೆ ತಾಲೂಕು ಪಂಚಾಯತಿ ಅಧಿಕಾರಿಗಳು ತನಿಖೆಗೆ ಬಂದಿದ್ದರು. ನಿನ್ನೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ವಿರೂಪಾಕ್ಷ ನಿಂದ ಸಂಗಪ್ಪನ ಮೇಲೆ ಹಲ್ಲೆ. ಹಲ್ಲೆ ಮಾಡಿರುವ  ವಿಡಿಯೋ ಸ್ಥಳೀಯರು ಮೊಬೈಲ್ ನಲ್ಲಿ‌ ಸೆರೆಯಾಗಿದೆ.