ಉ.ಕ ಸುದ್ದಿಜಾಲ ಮೈಸೂರು :

ಕನ್ನಡಿಗರ ನೆಚ್ಚಿನ ನಟ ಡಾಲಿ ಧನಂಜಯ್​ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅದೇನೆಂದರೆ ತನ್ನ ಮನದರಸಿಯನ್ನು ಪರಿಚಯಿಸುವ ಮೂಲಕ ಮದುವೆಯಾಗುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು. ಡಾಲಿ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ್ದಾರೆ. ಬಾಳ ಸಂಗಾತಿಯ ಜೊತೆಗೆ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆಯಾಗುವ ಬಗ್ಗೆ ತಿಳಿದಿದ್ದಾರೆ. ಅಂದಹಾಗೆಯೇ ಡಾಲಿ ಧನಂಜಯ್​ ಕೈ ಹಿಡಿಯುವ ವಧು ಯಾರು ಗೊತ್ತಾ?

ನಟ ಧನಂಜಯ್ ವೈದ್ಯೆಯನ್ನು ಕೈ ಹಿಡಿಯಲು ಮುಂದಾಗಿದ್ದಾರೆ. ಧನ್ಯತಾ ಎಂಬವರ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಂದಹಾಗೆಯೇ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಡಾಲಿ ಬಾಳ ಸಂಗಾತಿಯಾಗುತ್ತಿದ್ದಾರೆ .

ಸಾಮಾಜಿಕ ಜಾತಾಣಗಳಲ್ಲಿ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಡಾಲಿ ಧನಂಜಯ

ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ. ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಕೂಡ ಓದಿದ್ದು ಮೈಸೂರಿನಲ್ಲಿ. ಈಗ ಇವರಿಬ್ಬರು ತಮ್ಮ ಪ್ರೀತಿಗೆ ಮೂರು ಗಂಟು ಬಿಗಿಯಲು ಮುಂದಾಗಿದ್ದಾರೆ.