ಚಿಕ್ಕೋಡಿ :

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಚಿಕ್ಕೊಡಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 3 ನೇ ಸೆಮಿಸ್ಟರ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಈ ಸಮಾರಂಭದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಭೀಮರಾವ ಮಹೇಂದ್ರಕರ, ಹಿರಿಯ ಇಂಜಿನಿಯರ್, ಫ್ರೆಮ್ ಪ್ರಾಸೆಸ್ ಆಯ್ಯಂಡ್ ಎನರ್ಜಿ ಪ್ರಾ.ಲಿ ಪುಣೆ ಮಾತನಾಡಿ ಸುಜಿಯಿಂದ ಸೆಟೆಲೈಟವರೆಗೆ ಎಲ್ಲ ವಸ್ತುಗಳನ್ನು ಮೆಕ್ಯಾನಿಕಲ್ ಇಂಜಿನಿಯರ್ ನಿರ್ಮಿಸುತ್ತಾನೆ. ಹೀಗಾಗಿ ಯಾವತ್ತು ಮೆಕ್ಯಾನಿಕಲ್ ಇಂಜಿನಿಯರಗಳಿಗೆ ವಿಪುಲ ಅವಕಾಶಗಳಿರುತ್ತವೆ. ವಿದ್ಯಾರ್ಥಿಗಳು ಈ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕಾದರೇ ತಮ್ಮ ಪುಸ್ತಕದ ಜ್ಞಾನದ ಜೊತೆಗೆ ಪ್ರಾತ್ಯಕ್ಷಿಕ ಜ್ಞಾನ ಪಡೆದುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮ ಅಳವಡಿಸಿಕೊಂಡು ಯಶಸ್ಸು ಪಡೆದು ಪಾಲಕರಿಗೆ ಒಳ್ಳೆಯ ಹೆಸರು ತರಲು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ಈಗಾಗಲೇ ತಾವು ಒಂದು ಅದ್ಭುತವಾದ ವಿಭಾಗವನ್ನು ಆಯ್ಕೆ ಮಾಕೊಂಡಿದ್ದು, ತಮ್ಮ ಈ ಮೂರು ವರ್ಷದ ವಿದ್ಯಾರ್ಥಿ ಜೀವನದಲ್ಲಿ ಯಾಂತ್ರಿಕ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಜೊತೆಗೆ ಪ್ರತಿದಿನದ ಹೆಚ್ಚು ಸಮಯ ಕಾಲೇಜಿನ ಆವರಣದಲ್ಲಿದ್ದು, ಇಲ್ಲಿರುವ ಸೌಲಭ್ಯಗಳ ಸದೂಪಯೋಗ ಮಾಡಿಕೊಳ್ಳಿ ಎಂದರು.

ಕಾಲೇಜಿನ ಅಸೋಶಿಯೆಶನ್ ಆಫ್ ರಾಯಲ್ ಮೆಕ್ಯಾನಿಕಲ್ ಸ್ಟುಡೆಂಟ್ಸ್ ಸಂಯೋಜಕರಾದ ಪ್ರೊ. ಪ್ರಸಾದ ರಾಯನ್ನವರ 2021-22 ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳಲಿರುವ ಚಟುವಟಿಕೆಗಳನ್ನು ವಿವರಿಸಿದರು. ಶಿವಾನಂದ ವಿಭೂತೆ ಸ್ವಾಗತ ಗೀತೆ ಹಾಡಿದರು. ವಿಭಾಗ ಮುಖ್ಯಸ್ಥರಾದ ಪ್ರೊ. ಕುಮಾರ ಚೌಗಲಾ ಸ್ವಾಗತಿಸಿದರು. ಶಿವಶರಣ ಮೆಂಡಿಗೇರ ಅಥಿತಿಯನ್ನು ಪರಿಚಯಿಸಿದರು. ಅಶ್ವಿನಿ ಗಾಡಿವಡ್ಡರ ಹಾಗೂ ಅಮೀತ ದೇಶಪಾಂಡೆ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕ ಬಸವರಾಜ ಹುರಕಡ್ಲಿ ವಂದಿಸಿದರು.

ಈ ಸಂಧರ್ಭದಲ್ಲಿ ವಿಭಾಗ ಮುಖ್ಯಸ್ಥರಾದ ಡಾ.ಆರ್‌ ಕೆ ಪಾಟೀಲ, ಪ್ರೊ. ಬಿ ಎನ್ ಚೌಕಿಮಠ, ಸಚೀನ ಮೆಕ್ಕಳಕಿ, ಮೇಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ  ಭೋದಕ, ಭೊದಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.