ಅಥಣಿ :
ಈ ಅಕಾಲಿಕ ಮಳೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ, ಅಕಾಲಿಕ ಮಳೆಯಿಂದ ಗಡಿ ಭಾಗದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದು ಸುಮಾರು 6 ಹೆಕ್ಟರಗಿಂತ ಹೆಚ್ಚು ಬೆಳೆ ನಾಶವಾಗಿದೆ. ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಹವಾಮಾನ ವೈಪರಿತ್ಯದ ಕಾರಣ ದ್ರಾಕ್ಷಿ ಬೆಳೆಗೆ ರೋಗ ಬಾಧಿಸಿದ್ದು , ರೈತರನ್ನ ಹೈರಾಣಾಗಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿಬೆಳೆ ರೈತರಿಗೆ ಜೀವನಾಧಾರವಾಗಿದೆ. ಬಹುತೇಕ ಬೆಳೆಗಾರರು ಈಗ ದ್ರಾಕ್ಷಿ ಬೆಳೆ ಬೆಳಿದಿದ್ದಾರೆ. ತೋಟಗಳಲ್ಲಿ ಹೂವುಗಳು ಮೂಡಿ ಕಾಯಿ ಕಟ್ಟುವ ಹಂತದಲ್ಲಿದೆ. ಇಂತಹ ಸ್ಥಿತಿಯಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಡವಣಿ ಹಾಗೂ ಕೊಳೆ ರೋಗದಿಂದ ದ್ರಾಕ್ಷಿ ಕಾಳುಗಳು ಉದುರುತ್ತಿವೆ. ಅಥಣಿ ತಾಲೂಕಿನ ಸುಮಾರು 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು ಬಹುತೇಕ ದ್ರಾಕ್ಷಿ ಬೆಳೆಗೆ ರೋಗ ಬಿದ್ದಿದ್ದು ಸರಕಾರ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕಳೆದ ಎರಡು – ಮೂರು ದಿನಗಳಿಂದ ಮೋಡ ಕವಿದ ಮಂಜಿನಿಂದ ಹಾಗೂ ಮಳೆಯಿಂದ ದ್ರಾಕ್ಷಿಬೆಳೆಗೆ ವಣಿ ಹಾಗೂ ಕೊಳೆ ರೋಗ ಬೇಗನೇ ವ್ಯಾಪಿಸಿ ಹೂವು ಕಾಯಿ ಕಟ್ಟುವ ಕಾಳುಗಳನ್ನು ನಾಶ ಮಾಡುತ್ತದೆ ಇದರಿಂದ ದ್ರಾಕ್ಷಿಗೊನೆಯಲ್ಲಿರುವ ಕಾಳುಗಳು ನೆಲಕ್ಕೆ ಬೀಳುತ್ತದೆ. ಮಳೆಯಿಂದ ಗೊನೆಯಲ್ಲಿ ನೀರು ನಿಲ್ಲುವುದ್ದರಿಂದ ದ್ರಾಕ್ಷಿ ಗೊನೆಗಳು ಕೊಳೆಯುತ್ತವೆ . ರೈತರು ಎಷ್ಟು ಪ್ರಮಾಣದ ಔಷಧಿ ಸಿಂಪಡಿಸಿದರೂ, ರೋಗ ಹತೋಟಿಗೆ ಬರುವುದಿಲ್ಲ. ಅಥಣಿ ತಾಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಳ್ಳಿಗಳ ರೈತರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದ ಹಾನಿಯಾದ ಬಗ್ಗೆ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಹವಾಮಾನ ವೈಪರಿತ್ಯದಿಂದ ಕಂಗಾಲಾಗಿದ್ದಾರೆ. ಹೀಗಾಗಿ ಸರಕಾರ ಈ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಅಲ್ಲದೇ ದ್ರಾಕ್ಷಿ ಬೆಳೆಗೆ ವಿಮೆ ತುಂಬಿರುವ ರೈತರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದು ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ.


ಇದನ್ನೂ ಓದಿ : ಸುಮಾರು ವರ್ಷಗಳಿಂದ ರಸ್ತೆ ಹಾಳಾದರು ಗಮನಿಸದ ಅಧಿಕಾರಿಗಳು, ಜನಪ್ರತಿನಿಧಿಗಳು https://uksuddi.com/kagavad-dilapidated-road-between-ugara-bk-and-ugara-kh/#.YZ3TOgn8Koo.whatsapp