ಕಾಗವಾಡ :
ಪ್ರಥಮ ಪ್ರಾಶಸ್ತ್ಯದಿಂದ ಮತಗಳೊಂದಿಗೆ ಮಹಾಂತೇಶ ಕವಟಗಿಮಠ ಜಯಭೇರಿ ಆಗಲಿದ್ದಾರೆ ಬಿಜೆಪಿ ಪಕ್ಷದ ರಾಜ್ಯದ ಮುಖಂಡರು ಮಹಾಂತೇಶ್ ಕವಟಗಿಮಠ ಇವರಿಗೆ ಟಿಕೆಟ್ ನೀಡಿದ್ದು, ಪಕ್ಷದ ವತಿಯಿಂದ ಅವರ ಪರ ಮತಚಲಾಯಿಸಿ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಅತಿಥಿ ಗೃಹದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು,
ಮಹಾಂತೇಶ ಕವಟಗಿಮಠ ಅವರು ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಆಯ್ಕೆಯಾಗಲಿದ್ದಾರೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಇದ್ದರೂ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕಣಕ್ಕೆ ಇಳಿಸಿದ್ದಾರೆ ಹಾಗಾಗಿ ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಎರಡು ಮತ ಚಲಾಯಿಸಬೇಕಾಗಿದೆ.
ಎರಡನೇ ಮತ ಯಾರಿಗೆ ನೀಡವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪಕ್ಷದ ಮುಖಂಡರು ಇನ್ನೂ ನಿರ್ಣಯ ಕೈಗೊಂಡಿಲ್ಲ. ನಮ್ಮ ಹೈಕಮಾಂಡ ತುಂಬಾ ದೊಡ್ಡದಿದೆ. ಅವರ ಏನ ಹೇಳತ್ತಾರೆ ನೋಡಬೇಕು ಪಕ್ಷೇತರ ಅಭ್ಯರ್ಥಿಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಬಿಜೆಪಿ ಗೆಲ್ಲುವುದು ನಿಶ್ಚಿತ. ಈಗಾಗಲೇ ಎಲ್ಲಾ ನಾಯಕರು ಪರಿಷತ್ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದು, ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಎಲ್ಲಾ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ರವರಿಗೆ ಪ್ರಥಮ ಪ್ರಾಶಸ್ಥ್ಯದ ಮತವನ್ನು ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.