ಉ.ಕ ಸುದ್ದಿಜಾಲ ಬೆಳಗಾವಿ :

ಪ್ರಯಾಣಿಕರ ಹಿತದೃಷ್ಟಿಯಿಂದ ಮೈಸೂರು – ಬೆಳಗಾವಿ ಮಾರ್ಗದಲ್ಲಿ ಸಂಚರಿಸುವ ರೈಲಿನ ವೇಳಾಪಟ್ಟಿ ಬದಲಿಸಲಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಈ ಹಿಂದೆ ಮೈಸೂರಿನಿಂದ ಸಂಜೆ ಹೊರಡುತ್ತಿದ್ದ ರೈಲು, ಮಾರನೇ ದಿನ ಬೆಳಿಗ್ಗೆ 10.45ಕ್ಕೆ ಬೆಳಗಾವಿ ತಲುಪುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಹಾಗಾಗಿ ವೇಳಾಪಟ್ಟಿ ಬದಲಿಸುವಂತೆ ಜನರು ಸಲ್ಲಿಸಿದ ಮನವಿಗೆ ಸ್ಪಂದಿಸಿದ, ನೈರುತ್ಯ ರೈಲ್ವೆ ವಲಯ ವೇಳಾಪಟ್ಟಿ ಬದಲಿಸಿದೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಪ್ರತಿದಿನ ಸಂಜೆ 6ಕ್ಕೆ ಬೆಳಗಾವಿಯಿಂದ ಹೊರಡಲಿರುವ ರೈಲು ಮಾರನೇ ದಿನ ಬೆಳಿಗ್ಗೆ 5.55ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ರೈಲು ಬೆಳಿಗ್ಗೆ 8.45ಕ್ಕೆ ಬೆಳಗಾವಿಗೆ ತಲುಪಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕೋರಿದ್ದಾರೆ.