ಉ.ಕ ಸುದ್ದಿಜಾಲ ಅಥಣಿ :
ಆ ಕ್ಷೇತ್ರದ ಜನರಿಗೆ ಹಲವಾರು ದಶಕಗಳಿಂದ ನೀರಿಲ್ಲ ನಮ್ಮಗೆ ನೀರಾವರಿ ಯೋಜನೆ ಕಲ್ಪಿಸಿ ಎಂದು ಹಲವಾರು ಬಾರಿ ಹೋರಾಟಗಳು ನಡೆದಿವೆ. ಆದರೆ, ಇಂದು ಸ್ವತಃ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ. ಸಿ ಮಾಧುಸ್ವಾಮಿ ಕೆರೆ ತುಂಬಿಸುವ ಯೋಜನೆಗೆ ಕ್ಷೇತ್ರಕ್ಕೆ ಬಂದರೂ ಕೂಡಾ ಆ ಕ್ಷೇತ್ರದ ಶಾಸಕ ಆ ಕಾರ್ಯಕ್ರಮಕ್ಕೆ ಗೈರಾಗಿದ್ದು ಹಲವಾರು ಚರ್ಚೆಗೆ ಕಾರಣವಾಗಿದರ ಯಾರು ಆ ಶಾಸಕರು ಈ ಸ್ಟೋರಿ ನೋಡಿ
ಎಲ್ಲಿ ನೋಡಿದರಲ್ಲಿ ಬ್ಯಾನರಗಳು ಆ ಬ್ಯಾನರಗಳಲ್ಲಿ ಕ್ಷೇತ್ರದ ಶಾಸಕನ ಬದಲಾಗಿ ಮಾಜಿ ಡಿಸಿಎಂ ಪೋಟೊ ಹಾಗೂ ಆತನ ಸುಪುತ್ರನ ಪೋಟೊಗಳು ರಾಜಾಸುತ್ತಿವೆ. ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ 9 ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲು ಸಚಿವ ಮುಧುಸ್ವಾಮಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಆತನ ಸುಪುತ್ರ ಚಿದಾನಂದ ಸವದಿ ಸಾಥ್ ನೀಡಿದರು. ಆದರೆ, ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಗಾಯಬ್ ಆಗಿದ್ದರೆ. ಸರಕಾರಿ ಕಾರ್ಯಕ್ರಮದಲ್ಲಿ ಬ್ಯಾನರದಲ್ಲಿ ಮೂಲೆ ಸೇರಿದ ಅಥಣಿ ಶಾಸಕ ಮಹೇಶ ಕುಮಟಳ್ಳಿ. ಬೀದಿ ಬದಿಯ ಸ್ವಾಗತ ಪ್ಲೇಕ್ಸಗಳಲ್ಲಿ ಮಹೇಶ ಕುಮಟಳ್ಳಿ ಗಾಯಬ್ ಆಗಿದ್ದು ಕಂಡು ಬಂದಿದೆ. ಶಾಸಕರನ್ನ ಸಂಪರ್ಕ ಮಾಡದರೆ ಪೋನ್ ಸ್ವೀಚ್ ಆಫ್ ಇದರಿಂದ ಕ್ಷೇತ್ರದಲ್ಲಿ ಮತ್ತೆ ಒಡಕಾಗಿದೆಯಾ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ.
ಸಚಿವ ಮುದುಸ್ವಾಮಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿಅವರ ನೇತೃತ್ವದಲ್ಲಿ 49.51ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲೇ ಹಂತದ ಕಾಮಗಾರಿಗೆ ಚಾಲನೆ ನೀಡಿದರು. ಸುಮಾರು 113 ಕೋಟಿ ಕೋಟಿ ವೆಚ್ಚದ 09 ಕೆರೆ ತುಂಬಿಸುವ ಕಾಮಗಾರಿ ಇದಾಗಿದ್ದು, ಇದರಿಂದ ಮಡ್ಡಿ ಭಾಗದ ರೈತರಿಗೆ ಅನಕೂಲವಾಗಲಿದೆ. ಅಥಣಿಯ ಬಾಡಗಿ ಗ್ರಾಮದಲ್ಲಿ ಚಾಲನೆ ನೀಡಲಡಯಿತು. ಆದರೆ, ತಾವೇ ಪ್ರತಿನಿಧಿಸುವ ಕ್ಷೇತ್ರದ ಸರ್ಕಾರಿ ಕಾರ್ಯಕ್ರಮದತ್ತ ಸುಳಿಯದ ಶಾಸಕ ಮಹೇಶ ಕುಮಟಳ್ಳಿ ಮತ್ತೆ ಅಥಣಿಯಲ್ಲಿ ಲಕ್ಷ್ಮಣ ಸವದಿ ವರ್ಸಸ್ ಮಹೇಶ್ ಕುಮಟಳ್ಳಿ ವಾರ್ ನಡೆಯುತ್ತಿದೆಯಾ ಲಕ್ಷ್ಮಣ ಸವದಿ ಅವರು ತಂದಿರುವ ನೀರಾವರಿ ಯೋಜನೆಗೆ ಮಹೇಶ ಕುಮಟಳ್ಳಿ ಗೈರಾಗಿರುವ ಬಗ್ಗೆ ಸಚಿವ ಮಧುಸ್ವಾಮಿ ಹೇಳೊದು ಅವರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಿಂದ ಮಧುಸ್ವಾಮಿ ಬಂದರಲ್ಲ ಅವರ ಜೊತೆ ಬಂದಿದರೆ ನಡೆಯುತ್ತಿತ್ತು ಎಂದು ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ.
ರಾಷ್ಟ್ರಪತಿ ಚುನಾವಣೆ ಹಿನ್ನಲೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ಬೆಂಗಳೂರಿನಲ್ಲಿದ್ದಾರೆ ಎಂದು ಮಧುಸ್ವಾಮಿ ಹೇಳುತ್ತಿದ್ದಾರೆ. ಆದರೆ, ಬೆಂಗಳೂರಿನಿಂದ ಅಥಣಿಗೆ ಲಕ್ಷ್ಮಣ ಸವದಿ ಹಾಗೂ ಸಚಿವ ಮಧುಸ್ವಾಮಿ ಬರುವಾಗ ಇವರ ಜೊತೆ ಶಾಸಕ ಮಹೇಶ ಕುಮಟಳ್ಳಿ ಬಂದಿದರೆ ನಡೆಯುತ್ತಿತ್ತು, ಆದರೆ, ಮಹೇಶ ಕುಮಟಳ್ಳಿ ತಮ್ಮ ಸ್ವ ಕ್ಷೇತ್ರದ ಸರ್ಕಾರಿ ಕಾರ್ಯಕ್ರಮಕ್ಕೆ ಬರದಿರುವುದು ಎಲ್ಲೊ ಒಂದಕಡೆ ಮತ್ತೆ ಅಥಣಿ ಕ್ಷೇತ್ರದಲ್ಲಿ ವೈ ಮನಸ್ಸು ಪ್ರಾರಂಭವಾಯಿತಾ ಎಂದು ಕ್ಷೇತ್ರದ ಜನ ಪ್ರಶ್ನಿಸುತ್ತಿದ್ದಾರೆ.