ಉ.ಕ ಸುದ್ದಿಜಾಲ ಕಾಗವಾಡ :

ಕಾಗವಾಡ ಮತ ಕ್ಷೇತ್ರದಲ್ಲಿ ಸುಮಾರು ಒಂದು ವರೆ ವರ್ಷದಿಂದ ಒಂದು ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲಾ ಪ್ರತಿಯೊಂದು ಕಚೇರಿಯು ಭ್ರಷ್ಟಾಚಾರದ ಅಡ್ಡಾ ಆಗಿವೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಪರೋಕ್ಷವಾಗಿ ಶಾಸಕ ರಾಜು ಕಾಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಗವಾಡ ಮತ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಅಭಿವೃದ್ಧಿ ಕಾರ್ಯ ಕುಂಠಿತ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಹು ನಿರೀಕ್ಷಿತ ಖಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಚುನಾವಣೆಗು ಮುಂಚೆ ಎಷ್ಟು ಕಾಮಗಾರಿ ಆಗಿತ್ತು ಅಷ್ಟಕ್ಕೇ ನಿಂತಿದೆ.

ಇದರಿಂದ ಆ ಭಾಗದ ರೈತರು ಬೇಸತ್ತಿದ್ದಾರೆ,ಅಮಾಯಕರಗೆ ಪೋಲಿಸರಿಂದ ದೌರ್ಜನ್ಯ ಆಗುತ್ತಿವೆ. ಕಾಗವಾಡ ತಾಲ್ಲೂಕಿನ ಪತ್ರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡಯುತ್ತಿವೆ, ಕಳೆದ ಒಂದುವರೆ ವರ್ಷದಲ್ಲಿ ಒಂದೇ ಒಂದು ರಸ್ತೆ ಕಾಮಗಾರಿ ನಡೆದಿಲ್ಲಾ ಎಂದು ಪರೋಕ್ಷವಾಗಿ ಶಾಸಕ ರಾಜು ಕಾಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಆದರೆ ನನ್ನ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ರಸ್ತೆ ಸೇರಿದಂತೆ ಪತ್ರಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ, ಈಗ ಕ್ಷೇತ್ರದ ಜನರು ಹಾಗೂ ರೈತರು ವಿಧಾನ ಸಭಾ ಚುನಾವಣೆಯಲ್ಲಿ ಶ್ರೀಮಂತ ಪಾಟೀಲರನ್ನು ಸೋಲಿಸಿ ತಪ್ಪು ಮಾಡಿದೆವು ಎಂಬ ಮನೋಭಾವ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ.

ಕ್ಷೇತ್ರದ ಜನ ನಮ್ಮ ಬಳಿ ಬಂದು ಅಳಲು ತೊಡಿಕೊಳ್ಳುತ್ತಿದ್ದರಾ ರೈತರು ಹಾಗೂ ನಮ್ಮ ಕಾರ್ಯಕರ್ತರು ಅಂಜುವ ಅವಶ್ಯಕತೆ ಇಲ್ಲ ನಾನು ನಿಮ್ಮ ಜೊತೆಗೆ ಇರುತ್ತೆನೆ ಎಂದು ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ ಹೇಳಿದರು.