ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ವಾಕ್ ಸಮರ ತಾರಕಕ್ಕೇರಿದೆ. ಮಾಜಿ ಶಾಸಕ ಶ್ರೀಮಂತ ಪಾಟೀಲ ಹಾಲಿ ಶಾಸಕ ರಾಜು ಕಾಗೆ ವಿರುದ್ಧ ಭ್ರಷ್ಟಾಚಾರದ ಆರೋಪ ಹಾಗೂ ಕಳಪೆ ರಾಜಕಾರಣ ಎಂಬ ಮಾತನಾಡಿದ್ದರು.
ಹಾಲಿ ಶಾಸಕ ರಾಜು ಕಾಗೆ ತಿರುಗೇಟು ನೀಡಿದ್ದು ನನ್ನ ಬಗ್ಗೆ ಮಾತನಾಡಲು ಯೋಗ್ಯೆತೆ ಇಲ್ಲ, ಜನರು ತಮ್ಮನ್ನ ನಿರಾಕರಿಸಿದ್ದಾರೆ. ಬಸವೇಶ್ವರ ಏತ ನೀರಾವರಿಯಲ್ಲಿ ಹಲವು ಕಳಪೆ ಮಟ್ಟದ ಕಾಮಗಾರಿ ಹಾಗೂ ತಾಂತ್ರಿಕ ದೋಷಗಳಿಗೆ ನೀವೆ ಕಾರಣ ರಾಜಕೀಯ ಪಾರದರ್ಶಕವಾಗಿರಲಿ ಜನರು ನನಗೆ ಆಶೀರ್ವಾದ ಮಾಡಿದ್ದಾರೆ.
ನೀನು ನನ್ನ ಬಗ್ಗೆ ಮಾತನಾಡ ಬೇಡ ಅಪ್ಪಿ ತಪ್ಪಿ ಮಾತನಾಡಿದರೆ ನಾನು ನಿಮ್ಮ ಬಟ್ಟೆ ಬಿಚ್ಚುವೆ ಎಂದು ರಏಕವಚನದಲ್ಲೆ ಮಾಜಿ ಶಾಸಕ ಶ್ರೀಮಂತ ಪಾಟೀಲ ವಿರುದ್ಧ ಆಕ್ರೋಶ ಹೊರಹಾಕಿದರು.
ನಾನ ಒಂದು ವೇಳೆ ಪೋಲಿಸರಿಗೆ ಪೋನ ಮಾಡಿ ಕೇಸ ತೊಗಳದ ಹಾಗೆ ಮಾಡಿದ್ದರೆ ಅದನ್ನ ಸಾಬೀತ ಮಾಡಿದರೆ ನಾನೂ ಇವತ್ತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ರಾಜು ಕಾಗೆ.
ನೀವ ಶಾಸಕರಾಗಿದ್ದಾಗ ಜನರಿಗೆ ಬಳ್ಳೆದ ಮಾಡಿದ್ದರಿ ಹಾಗಾದರೆ ಚುನಾವಣೆಯಲ್ಲಿ ಏಕ ಸೋತರಿ ಹಾಗಾದರೆ ಕ್ಷೇತ್ರದ ಜನ ನಿಮ್ಮನ್ನ ಗೆಲ್ಲಿಸಬೇಕಿತ್ತು ನನ್ನ ಯಾಕ ಗೆಲ್ಲಿಸದ್ದರಿ ಎಂದು ಶ್ರೀಮಂತ ಪಾಟೀಲ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಗೆ.
ನಿಮ್ಮ ಹಾಗೆ ನಾನ ಯಾವತ್ತೂ ವಿಜೃಂಭಣೆಯಿಂದ ಹುಟ್ಟು ಹಬ್ಬ ಮಾಡಿಕೊಂಡಿಲ್ಲ ಜನಸಾಮಾನ್ಯರಿಗೆ ಅಧಿಕಾರಿಗಳಿಗೆ ತೊಂದರೆ ನೀಡಿಲ್ಲ ಮಾಜಿಶಾಸಕ ಶ್ರೀಮಂತ ಪಾಟೀಲ ವಿರುದ್ದ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಾಗವಾಡ ಶಾಸಕ ರಾಜು ಕಾಗೆ.