ಉ.ಕ ಸುದ್ದಿಜಾಲ ಕಾಗವಾಡ :

KSRTC ಪ್ರಯಾಣಿಕರ ಜೇಬಿಗೆ ಬೀಳುತ್ತಾ ಕತ್ತರಿ? ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿದ NWKRTC ನಿಗಮ ಮಂಡಳಿ ಅಧ್ಯಕ್ಷ ರಾಜು ಕಾಗೆ.

ಟಿಕೆಟ್ ದರ ಹೆಚ್ಚಳ ಮಾಡಲಾಗುವುದು ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷ ಹೇಳಿಕೆ. ಸಾರಿಗೆ ಇಲಾಖೆ ನಷ್ಟದಲ್ಲಿದೆ,‌ಅದಕ್ಕೆ ಟಿಕೆಟ್ ದರ ಹೆಚ್ಚಳ ಮಾಡೋ ಬಗ್ಗೆ ಚರ್ಚೆ ಮಾಡ್ತಿವಿ. ಆಯಿಲ್ ಸೇರಿದಂತೆ ಬಸ್ಸಿನ ಬಿಡಿ ಭಾಗಗಳ ಬೆಲೆ ಹೆಚ್ಚಳವಾಗಿದೆ.

4 ವರ್ಷಗಳಿಂದ ಬಸ್ ಟಿಕೆಟ್ ದರ ಹೆಚ್ಚಳವಾಗಿಲ್ಲ. ದರ ಹೆಚ್ಚಳ ಮಾಡುವುದರ ಬಗ್ಗೆ ನಿರ್ಣಯ ಮಾಡಿಕೋಳ್ಳತಿವಿ.ವಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ. ಶಕ್ತಿ ಯೋಜನೆಯಿಂದ ಆದಾಯ‌ ಬರುತ್ತಿದೆ.

400 ಬಸ್‌ಗಳನ್ನು ಹೆಚ್ಚಿಗೆ ಖರೀದಿಸಲಾಗಿದೆ. ಹಳೆಯ ಬಸ್‌ಗಳನ್ನ ಮಾರಾಟ ಮಾಡಲಾಗುತ್ತಿದೆ. ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಚರ್ಚೆ ಮಾಡಿ ಒಂದು ಹಂತಕ್ಕೆ ತರ್ತಿವಿ ಎಂದ ಶಾಸಕ ರಾಜು ಕಾಗೆ.