ಉ.ಕ ಸುದ್ದಿಜಾಲ ದಾವಣಗೆರೆ :

ಬಿಜೆಪಿಗೆ ವಲಸೆ ಹೋದ ಶಾಸಕರು ಕಾಂಗ್ರೆಸ್ ಗೆ ಬಂದೆ ಬರ್ತಾರೆ, ಈಗಾಗಲೇ ಪಕ್ಷದ ಅಧ್ಯಕ್ಷರಿಗೆ ಸಿಎಲ್‌ಪಿ ನಾಯಕರಿಗೆ ಭೇಟಿಯಾಗಿದ್ದಾರೆ ಈಗಾಗಲೇ ಒಂದು ಹಂತದ ಮಾತುಕಥೆ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು,‌ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಕ್ಕೆ ಬರಲಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ ಎಂದರು. ಸಿಎಂ ಇಬ್ರಾಹಿಂ ಜೊತೆ ವರಿಷ್ಠರು ಮಾತುಕಥೆ ನಡೆಸುತಿದ್ದಾರೆ. ನಮ್ಮ ಜೊತೆಯೇ ಇರ್ತಾರೆ ಅನ್ನೋ ವಿಶ್ವಾಸ ಇದೆ. ಸಿದ್ದರಾಮಯ್ಯನವರೆ ಮಾತನಾಡ್ತಾ ಇದ್ದಾರೆ ಎಂದು ಹೇಳಿದರು.

ಹಿಜಾಬ್ – ಕೇಸರಿ ಗಲಾಟೆ ವಿಚಾರ, ಅದು ಉಡುಪಿಯಿಂದ ಆರಂಭ ಆಗಿದೆ ಅದನ್ನ ಮಾಡಿದವರು ಕೆಲವೇ ಕೆಲವು ಸಂಘಟನೆಯವರು. ಅದು ಬೇಗ ಮುಗಿಲಿ ಅನ್ನೋದು ನಮ್ಮ ಆಸೆ. ನಮ್ಮ ದೇಶ ಸಮಾಜದ ಪ್ರಾಮುಖ್ಯತೆ ದೇಶ ಹಿಜಾಬ್-ಕೇಸರಿ ವಿಚಾರವಾಗಿ ಸರ್ಕಾರ-ನ್ಯಾಯಾಲಯ ಒಂದು ತೀರ್ಮಾನಕ್ಕೆ ಬರಬೇಕು. ಎರಡು ಕಡೆ ಸರಿಯಾದ ನ್ಯಾಯ ಸಿಗುವಂತೆ ಆಗಬೇಕು ಎಂದರು.