ಉ.ಕ ಸುದ್ದಿಜಾಲ ಅಥಣಿ :
ರಸ್ತೆ ಕಾಮಗಾರಿಯ ಗುಣಮಟ್ಟ ಹಾಗೂ ಬಾಕಿ ಉಳಿದಿರುವ ಕೆಲಸದ ಬಗ್ಗೆ ಮೇಲಧಿಕಾರಿಗಳಿಗೆ ಮೌಖಿಕ ವರದಿ ನೀಡಿದ ಸಹಾಯಕ ಎಂಜಿನಿಯರ್ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಗುತ್ತಿಗೆದಾರ ಒಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಅನಿಲ ಕಾಶೀನಾಥ ಪವಾರ ಅವರ ಮೇಲೆ ಹಲ್ಲೆ ಮಾಡಿದ, ಗುತ್ತಿಗೆದಾರ ದಿಲೀಪ ರಮೇಶ ಕಾಂಬಳೆ ಬಂಧಿತರು.
ಇಬ್ಬರ ಮಧ್ಯ ಕಳೆದ ಬುಧವಾರ ತಂಟೆ ನಡೆದಿತ್ತು. ತಾಲ್ಲೂಕಿನ ಘಟನಟ್ಟಿ ಕ್ರಾಸ್‌ದಿಂದ ಘಟನಟ್ಟಿ ಗ್ರಾಮದವರೆಗಿನ ರಸ್ತೆ ಸುಧಾರಣೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಮತ್ತು ಅಪೂರ್ಣವಾಗಿದೆ ಎಂದು ಎಂಜಿನಿಯರ್ ಮೌಖಿಕ ಮಾಹಿತಿ ನೀಡಿದ್ದರು.
ಈ ಸಿಟ್ಟಿನಿಂದ ಹಲ್ಲೆ ಮಾಡಿದ್ದಲ್ಲದೇ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಥಣಿ ಠಾಣೆಗೆ ದೂರು ನೀಡಲಾಗಿತ್ತು.