ಉ.ಕ ಸುದ್ದಿಜಾಲ ಕಾಗವಾಡ :

ಸಚಿವ ಸ್ಥಾನಕ್ಕೆ ಈಗಾಗಲೇ ಕೆಲ ಶಾಸಕರು ತಮ್ಮಷ್ಟಕ್ಕೆ ತಾವೇ ಕಸರತ್ತು ನಡೆಸಿದ್ದು, ನಮ್ಮಗೆ ಮುಂದಿನ ಸಚಿವ ಸಂಪುಟದಲ್ಲಿ ನಮ್ಮಗೆ ಸಚಿವ ಸ್ಥಾನ ನೀಡಲೆಬೇಕೆಂದು ಬೆನ್ನತ್ತಿದ್ದಾರೆ. ಆದರೆ, ಈ ಕ್ಷೇತ್ರದ ಜನರು ಮಾತ್ರ ನಮ್ಮ ಶಾಸಕರಿಗೆ ಮಂತ್ರಿ ಸ್ಥಾನ ನೀಡದೆ ಇದ್ದರೆ ಉಗ್ರ ಹೋರಾಟ ಮಾಡಿ ರಾಜ್ಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹೌದು ವಲಸಿಗ ಶಾಸಕರಲ್ಲಿ ಒಬ್ಬರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನನಗೆ ಸಚಿವ ಸ್ಥಾನ ಸಿಕ್ಕೆ ಸಿಗುತ್ತೆ ಯಾವುದೇ ಸಂಶಯವಿಲ್ಲ ನೂರಕ್ಕೆ ನೂರರಷ್ಟು ಸಿಕ್ಕೆ ಸಿಗುತ್ತೆ ಎನ್ನುವ ನಂಬಿಕೆಯಲ್ಲಿದ್ದಾರೆ. ನನಗೆ ಈ ಬಾರಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತೆ ನನಗೆ ಹೈ ಕಮಾಂಡ ಸ್ಪಷ್ಟವಾಗಿ ಹೇಳಿದೆ. ಈ ಬಾರಿ ನನ್ನ ಹೆಸರು ಲಿಸ್ಟನಲ್ಲಿ ಇದೆ. ನಿವೇನು ಕಾಳಜಿ‌ ಮಾಡಬೇಡಿ ನಿಮ್ಮ ಹೆಸರು ಪೈನಲ್ ಇದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳುತ್ತಿದ್ದಾರೆ. ಕಳೆದ ಬಾರಿಯೂ ಕೂಡಾ ಇವರು ಇದೇ ತರನಾಗಿ‌ ಮಂತ್ರಿ ಸ್ಥಾನ ಸಿಗುತ್ತೆ ಎಂದು ಹೇಳಿದ್ದರು.

ಕೊನೆಯ ಗಳಿಗೆಯಲ್ಲಿ ಮಂತ್ರಿ ಸ್ಥಾನ ತಪ್ಪಿತು. ಅದರಂತೆ ಈ ಬಾರಿಯೂ ಕೂಡಾ ಕೈ ತಪ್ಪ ಬಾರದು ಈಗಾಗಲೇ ನಮ್ಮ ಶಾಸಕರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ‌ ಹೆಸರಿಲ್ಲ, ಕಳೆದ ಬಾರಿಯಂತೆ ಈ ಬಾರಿಯೂ ಕೂಡಾ‌ ನಮ್ಮ ಶಾಸಕರಿಗೆ ಮಂತ್ರಿ‌ ಸ್ಥಾನ ನೀಡದೆ ಹೋದರೆ ಶ್ರೀಮಂತ ಪಾಟೀಲ‌ ಅಭಿಮಾನಿ ಬಳಗದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಕಾಗವಾಡ ಮತಕ್ಷೇತ್ರದ ಜನರು.

ಕಳೆದ ಬಿ ಎಸ್ ವೈ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶ್ರೀಮಂತ ಪಾಟೀಲ ಸದ್ಯ ಸಚಿವ ಸ್ಥಾನ ವಂಚಿತರಾಗಿದ್ದರಿಂದ ಅವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಶ್ರೀಮಂತ ಪಾಟೀಲ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದು ಸರ್ಕಾರ ಸ್ಥಾಪನೆಗೆ ಕಾರಣವಾಗಿದ್ದ ಶಾಸಕರಲ್ಲಿ ಶ್ರೀಮಂತ ಪಾಟೀಲ ಕೂಡ ಒಬ್ಬರಾಗಿದ್ದು ಕಾಗವಾಡ ಮತಕ್ಷೇತ್ರದ ಅಭಿವೃದ್ಧಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಸಚಿವರನ್ನಾಗಿ ಮುಂದುವರೆಸುವಂತೆ ಆಗ್ರಹಗಳು ಕೇಳಿಬಂದಿವೆ.‌

ಕಳೆದ ಬಾರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಕೈಬಿಟ್ಟ ಹಿನ್ನೆಲೆಯಲ್ಲಿ ಕಾಗವಾಡದಲ್ಲಿ ಅವರ ಬೆಂಬಲಿಗರಿಂದ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ಕೊಡುವಂತೆ ಆಗ್ರಹಗಳು ಕೇಳಿ ಬಂದಿದ್ದು, ಶಾಸಕ ಶ್ರೀಮಂತ ಪಾಟೀಲರಗೆ ಸಚಿವ ಸ್ಥಾನ ದೊರೆಯದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ‌ ಸರ್ಕಾರ ರಚನೆಗೆ ಕಾರಣಿಕರ್ತರಲ್ಲಿ ಒಬ್ಬರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಕಳೆದ ಬಾರಿಯೂ ಕೂಡಾ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿರುವ ಕಾಗವಾಡ ಶಾಸಕ‌ ಶ್ರೀಮಂತ ಪಾಟೀಲ ಅವರಿಗೆ ಈ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗುತ್ತಾ ಕಾಯ್ದು ನೋಡಬೇಕಿದೆ.